ಮೇಲಂತಬೆಟ್ಟು: ಅಕ್ರಮ ಗೋಸಾಗಾಟ: ಆರೋಪಿ ಪೊಲೀಸರ ವಶ

0

ಮೇಲಂತಬೆಟ್ಟು: ಪಿಕಪ್ ವಾಹನವೊಂದರಲ್ಲಿ ಯಾವುದೇ ಪರವಾನಿಗೆಯಿಲ್ಲದೆ ಹಿಂಸಾತ್ಮಕವಾಗಿ ಗೋವುಗಳನ್ನು ಸಾಗಿಸುತ್ತಿದ್ದ  ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದುಕೊಂಡಿರುವ  ಘಟನೆ ಸೆ.29 ರಂದು ನಡೆದಿದೆ.

ಬೆಳ್ತಂಗಡಿ ಪೊಲೀಸ್ ಠಾಣೆಯ ಪಿ.ಎಸ್ ಐ ಮುರಳೀಧರ ನಾಯ್ಕ ಹಾಗೂ ಸಿಬ್ಬಂದಿಗಳು  ಬೆಳ್ತಂಗಡಿ ಪೇಟೆಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಸವಣಾಲು ಕಡೆಯಿಂದ ಪಿಕಪ್ ವಾಹನವೊಂದರಲ್ಲಿ ದನವೊಂದನ್ನು ತುಂಬಿಸಿ ಮಾಂಸಕ್ಕಾಗಿ ವಧೆ ಮಾಡಲು ಚರ್ಚ್ ರೋಡ್ ಕಡೆಗೆ   ಬರುತ್ತಿರುವುದಾಗಿ ಮಾಹಿತಿ ಬಂದ  ಹಿನ್ನೆಲೆಯಲ್ಲಿ ಸವಣಾಲು ಕಡೆಯಿಂದ ಬರುತ್ತಿದ್ದ ವಾಹನವನ್ನು ಮೇಲಂತಬೆಟ್ಟು ಕ್ರಾಸ್ ಬಳಿ ಸಿಬ್ಬಂದಿಗಳ ಸಹಾಯದಿಂದ ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಪಿಕಪ್ ನಲ್ಲಿ ದನ ಇರುವುದು ಪತ್ತೆಯಾಗಿದೆ. ಆರೋಪಿಯನ್ನು ವಿಚಾರಿಸಿದಾಗ ಮಾಂಸಕ್ಕಾಗಿ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಪಿಕಪ್ ಚಾಲಕನನ್ನು ವಿಚಾರಿಸಿದಾಗ ಯಾವುದೇ ಪರವಾನಿಗೆ ಇಲ್ಲದೆ ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು ಸಾಗಿಸುವುದು ಎಂದು ತಿಳಿದುಬಂದಿದೆ.

ಆರೋಪಿ ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಮಂಜಲಪಲ್ಕೆ ಹಟತ್ತೋಡಿ ನಿವಾಸಿ ಸುಂದರ ಮೂಲ್ಯ(59)

ಪೊಲೀಸರು ಆರೋಪಿಯನ್ನು ಹಾಗೂ ದನ ಸಾಗಾಟ ಮಾಡುತ್ತಿದ್ದ ಪಿಕಪ್ ಮತ್ತು ಅಂದಾಜು 1,60,000 ರೂ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here