ಪಟ್ರಮೆ ಗ್ರಾ.ಪಂ ದ್ವಿತೀಯ ಸುತ್ತಿನ ಗ್ರಾಮ ಸಭೆ

0

ಪಟ್ರಮೆ: ಪಟ್ರಮೆ ಗ್ರಾ.ಪಂಚಾಯತ್ ನ 2022-23ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆಯು ಗ್ರಾ.ಪಂ ಸಭಾಭವನದಲ್ಲಿ ಅ.1 ರಂದು ಜರುಗಿತು.

ಪಟ್ರಮೆ ಗ್ರಾ.ಪಂ ಅಧ್ಯಕ್ಷೆ ಮೋಹಿನಿ ಅಧ್ಯಕ್ಷತೆಯನ್ನು ವಹಿಸಿದ್ದರು.

ಗ್ರಾಮ ಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿ ಚಿದಾನಂದ ಹೂಗಾರ್ ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ ಕೊಕ್ಕಡ ಇವರು ಭಾಗಿಯಾಗಿದ್ದರು.

ಪಂ ಅಭಿವೃದ್ಧಿ ಅಧಿಕಾರಿ ರಿತೇಶ್ ಪುತ್ರನ್ ಎನ್ ಅನುಪಾಲನಾ ವರದಿ ಮಂಡಿಸಿದರು. ಪಂ ಕಾರ್ಯದರ್ಶಿ ಅಮ್ಮಿ ಬಿ.ಪಿ ವಾರ್ಡ್ ಸಭೆಯ ವರದಿಯನ್ನು ಮಂಡಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರು ಯತೀಶ್ ಕುಮಾರ್ ಮತ್ತು ಸದಸ್ಯರು, ಇಲಾಖಾಧಿಕಾರಿಗಳು, ಅಂಗನವಾಡಿ ಆಶಾ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here