ಸೇಕ್ರೆಡ್.ಹಾರ್ಟ್ ಪದವಿ ಪೂರ್ವ ಕಾಲೇಜು: ಗಾಂಧಿ,ಶಾಸ್ತ್ರಿ ಜಯಂತಿ ಆಚರಣೆ

0

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪ.ಪೂ ಕಾಲೇಜಿನಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ವಂ|ಜೆರೊಮ್ ಡಿಸೋಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮಹಾತ್ಮ ಗಾಂಧಿ,ಲಾಲ್ ಬಹದ್ದೂರ್ ಶಾಸ್ತ್ರಿ ವಿಶ್ವ ಕಂಡ ಮಹಾನ್ ಚೇತನಗಳು ,ಯಾವುದೇ ಪ್ರತಿಫಲ ಅಪೇಕ್ಷೆ ಯಿಲ್ಲದೆ ದೇಶ ಸೇವೆಗೈದ್ದವರು.ಇಂದು ಕೆಲವರು ಕೇವಲ ಪ್ರಶಸ್ತಿ ಪುರಸ್ಕಾರಕ್ಕಾಗಿ ಹಂಬಲಿಸುತ್ತಾರೆ,ಆದ್ದರಿಂದ ಪ್ರಸ್ತುತ ಸಮಾಜಕ್ಕೆ ಗಾಂಧಿ ,ಶಾಸ್ತ್ರಿಯವರ ಆದರ್ಶ ತತ್ವಗಳ ಅಗತ್ಯವಿದೆ ಎಂದು ಅವರು ಹೇಳಿದರು.

ಪ್ರೌಢ ಶಾಲಾ ಮುಖ್ಯ ಶಿಕ್ಷಕ ಮೋಹನ್ ನಾಯಕ್ ಸ್ವಾಗತಿಸಿದರು,ಶಿಕ್ಷಕ ಜಯರಾಂ, ವಿದ್ಯಾರ್ಥಿಗಳಾದ ಫ್ಲೆನ್ ಜೊನ್ಸ್ ಪಿಂಟೋ, ಜೀವನ್ ಕೆ,ಅಫ್ನಾಝ್ ಗಾಂಧಿ ಹಾಗೂ ಶಾಸ್ತ್ರಿ ಅವರ ಬಗ್ಗೆ ಅನಿಸಿಕೆ ವ್ಯಕ್ತ ಪಡಿಸಿದವರು.ಶಿಕ್ಷಕಿಯರಾದ ಗ್ರೇಸಿ ಡಿಸೋಜಾ ವಂದಿಸಿ,ಶಾಂತಿ ಮೇರಿ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here