ನಿಡ್ಲೆ: ಶ್ರೀ ದುರ್ಗಾ ಅಟೋ ವರ್ಕ್ಸ್ ನಲ್ಲಿ ಆಯುಧ ಪೂಜೆ: ಸಾಧಕರಿಗೆ ಗೌರವಾರ್ಪಣೆ

0

ನಿಡ್ಲೆ: ಶ್ರೀ ದುರ್ಗಾ ಅಟೋ ವರ್ಕ್ಸ್ ಸಂತೋಷನಗರ ಬೂಡುಜಾಲು ಇಲ್ಲಿ ಅ.4ರಂದು ಆಯುಧ ಪೂಜೆ ಜರುಗಿತು.

ಹಲವಾರು ದ್ವಿಚಕ್ರ, ತ್ರಿಚಕ್ರ, ಕಾರುಗಳಿಗೆ ವಾಹನ  ಪೂಜೆ ಮಾಡಲಾಯಿತು. ಪ್ರತೀ ವರ್ಷ ಆಯುಧ ಪೂಜೆಯ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗೌರವಿಸಲಾಗುತ್ತಿತ್ತು ಅದರಂತೆ ಈ ವರ್ಷವು ತೆಂಕುತಿಟ್ಟಿನ ಪ್ರಸಿದ್ದ ಯಕ್ಷಗಾನ ಕಲಾವಿದರಾದ ಗೋವಿಂದ ಭಟ್ ಭಾರದ್ವಾಜ ಮನೆ ನಿಡ್ಲೆ ಇವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವಾಹನಗಳ ಮಾಲಕರು, ಗ್ರಾಮಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನೂ ಮಾಲಕ ಪ್ರಶಾಂತ್ ಜಿ ಸ್ವಾಗತಿಸಿ ಸತ್ಕರಿಸಿದರು.

LEAVE A REPLY

Please enter your comment!
Please enter your name here