ಕೊಯ್ಯೂರು : ಅರಂತಬೈಲು ಶ್ರೀ ಉಳ್ಳಾಲ್ತಿ ಭಜನಾ ಮಂದಿರದ ವತಿಯಿಂದ ಪವರ್ ಮ್ಯಾನ್ ವಸಂತ ಗೌಡ ಜಂಕಿನಡ್ಕ ಇವರಿಗೆ ಗೌರವಾರ್ಪಣೆ

0

ತೋಟತ್ತಾಡಿ: ಶ್ರೀ ಉಳ್ಳಾಲ್ತಿ ಭಜನಾ ಮಂದಿರ ಅರಂತಬೈಲುವಿನಲ್ಲಿ ನವರಾತ್ರಿ ಪ್ರಯುಕ್ತ ನಡೆದ ಭಜನಾ ಕಾರ್ಯಕ್ರಮದಲ್ಲಿ ತೋಟತ್ತಾಡಿ, ಚಾರ್ಮಾಡಿ, ನೆರಿಯ, ಚಿಬಿದ್ರೆ ವಲಯದಲ್ಲಿ ಸುಮಾರು 10 ವರ್ಷಗಳ ಕಾಲ ಲೈನ್ ಮ್ಯಾನ್ ಆಗಿ ಸೇವೆ ಸಲ್ಲಿಸಿದ್ದ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಜಂಕಿನಡ್ಕ ನಿವಾಸಿ ವಸಂತ ಜಂಕಿನಡ್ಕ ಇವರಿಗೆ ಶ್ರೀ ಉಳ್ಳಾಲ್ತಿ ಭಜನಾ ಮಂದಿರ ಅರಂತಬೈಲು ತೋಟತ್ತಾಡಿ ಇವರ ವತಿಯಿಂದ ಅ.4ರಂದು  ಗೌರವಾರ್ಪಣೆಯನ್ನು ಮಾಡಲಾಯಿತು.

ಇವರು ಜಂಕಿನಡ್ಕ ಕುಶಾಲಪ್ಪ ಗೌಡ ಮತ್ತು ಹೊನ್ನಮ್ಮ ದಂಪತಿಗಳ ಪುತ್ರ.

ವಸಂತ ಜಂಕಿನಡ್ಕ ಇವರು ತಮ್ಮ ಕಾರ್ಯಕ್ಷೇತ್ರದಲ್ಲಿ ಬರುವ ವಿದ್ಯುತ್ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಾ ಕ್ಷೇತ್ರದ ಜನರಿಗೆ ಅಚ್ಚುಮೆಚ್ಚಿನ ಒಡನಾಡಿಯಾಗಿದ್ದಾರೆ.

ಈ ಸಂದರ್ಭದಲ್ಲಿ ಭಜನಾ ಮಂದಿರದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here