ಉಜಿರೆ ರಕ್ಷಾ ಆಗ್ರೋ ಟ್ರೇಡರ್ಸ್ ಪುನರಾರಂಭ

0

ಉಜಿರೆ: ಇಲ್ಲಿನ ಚಾರ್ಮಾಡಿ ರಸ್ತೆಯ ಅನುಗ್ರಹ ಶಾಲೆಯ ಮುಂಭಾಗದಲ್ಲಿ ರಕ್ಷಾ ಆಗ್ರೋ ಟ್ರೇಡರ್ಸ್ ಅ.5ರಂದು ಪುನರಾರಂಭಗೊಂಡಿತು.

ಉಜಿರೆ ಜನಾರ್ದನ ದೇವಸ್ಥಾನದ ಶರತ್ ಕೃಷ್ಣ ಪಡುವೆಟ್ನಾಯ ದೀಪ ಬೆಳಗಿಸಿ  ಉದ್ಘಾಟಿಸಿ ಮಾತನಾಡಿ ಕಾಡ್ಗಿಚ್ಚಿನಿಂದ ಕಾಡು ನಾಶವಾದರೂ ಮತ್ತೆ ಚಿಗುರಿ ತನ್ನ ಹಸಿರನ್ನು ಇನ್ನಷ್ಟು ಪಸರಿಸುತ್ತದೆ. ಅಗ್ನಿ ಎಂಬುದು ಪವಿತ್ರ, ಇದರ ಸ್ಪರ್ಶದಿಂದ ಹಾನಿಗೀಡಾಗಿದ್ದ ಈ ಮಳಿಗೆ ಮುಂದಿನ ದಿನಗಳಲ್ಲಿ ಉತ್ತಮ ಸೇವೆಯೊಂದಿಗೆ ಹೆಚ್ಚಿನ ವ್ಯವಹಾರ ನಡೆಸಲಿ. ಉಜಿರೆಯ ವರ್ತಕರು ಸೇರಿದಂತೆ ಹಲವರು ನೀಡಿರುವ ಸಹಕಾರ ಇತರರಿಗೆ ಮಾದರಿಯಾಗಿದೆ. ಎಂದರು.

ಧರ್ಮಸ್ಥಳ ಕೃಷಿ ವಿಭಾಗದ ವ್ಯವಸ್ಥಾಪಕ ಬಾಲಕೃಷ್ಣ ಪೂಜಾರಿ ಮಾತನಾಡಿ ಕಹಿ ನೆನಪು ಮರುಕಳಿಸಬಾರದು. ಉದ್ಯಮಗಳನ್ನು ನಡೆಸುವ ಹಿಂದೆ ಸಾಕಷ್ಟು ಕಷ್ಟ ನಷ್ಟಗಳಿವೆ ಇದನ್ನು ಎದುರಿಸಿ ಮುನ್ನುಗ್ಗುವ ಛಲದೊಂದಿಗೆ ಸಾಗಬೇಕು. ಕಷ್ಟಕ್ಕೊಳಗಾದವರಿಗೆ ವ್ಯವಹಾರಿಕ ಸಹಕಾರದ ಅಗತ್ಯವಿದೆ ಎಂದರು.

ಉಜಿರೆ ವರ್ತಕರ ಸಂಘದ ಅಧ್ಯಕ್ಷ ಅರವಿಂದ ಕಾರಂತ,ತಾಲೂಕು ಕರಾಡ ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ.ಪ್ರದೀಪ್ ಆಟಿಕುಕ್ಕೆ,ಎಸಿಸಿಇ ಐ ಬೆಳ್ತಂಗಡಿ ಸೆಂಟರ್ ಇದರ ಅಧ್ಯಕ್ಷ ಇಂಜಿನಿಯರ್ ಜಗದೀಶ್ ಪ್ರಸಾದ್ ಎನ್, ಸದಸ್ಯ ವಿದ್ಯಾ ಕುಮಾರ್ ಕಾಂಚೋಡು, ಎಸ್ ಡಿಎಂ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಮೋಹನ ನಾರಾಯಣ ಶುಭ ಹಾರೈಸಿದರು.

ನಾವೂರು ಗ್ರಾಪಂ ಅಧ್ಯಕ್ಷ ಗಣೇಶ ಗೌಡ, ನಾರಾಯಣ ಭಟ್, ರಮಾನಂದ ಶರ್ಮ, ವರ್ತಕರ ಸಂಘದ ಸದಸ್ಯರು ಉಪಸ್ಥಿತರಿದ್ದರು.ಮಾಲಕರಾದ ನಾಗೇಶ್ ಭಟ್ ಸ್ವಾಗತಿಸಿದರು. ಗೋವಿಂದ ಭಟ್ ವಂದಿಸಿದರು.

ಅ.31ರಂದು ಉಂಟಾದ ಅಗ್ನಿ ಅನಾಹುತದಿಂದ ಈ ಅಂಗಡಿಯಲ್ಲಿ ಸುಮಾರು 80 ಲಕ್ಷ ರೂ. ಗಿಂತ ಅಧಿಕ ಮೊತ್ತದ ಸೊತ್ತುಗಳು ನಾಶವಾಗಿ ಕಟ್ಟಡವು ಸಂಪೂರ್ಣ ಹಾನಿಗೊಳಗಾಗಿತ್ತು. ಇದೀಗ ಅಂಗಡಿಯನ್ನು ನವೀಕರಣಗೊಳಿಸಿ ಆರಂಭಿಸಲಾಗಿದೆ.

LEAVE A REPLY

Please enter your comment!
Please enter your name here