ಬಂದಾರು ಗ್ರಾ.ಪಂ 2021-22ಸಾಲಿನ ಪ್ರಥಮ ಹಂತದ ಗ್ರಾಮ ಸಭೆ

0

ಬಂದಾರು: 2021-22ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಗ್ರಾಮ  ಪಂಚಾಯತ್ ಅಧ್ಯಕ್ಷೆ  ಪರಮೇಶ್ವರಿ ಗೌಡರವರ ಅಧ್ಯಕ್ಷತೆಯಲ್ಲಿ ಅ. 10ರಂದು ಗ್ರಾಮ ಪಂಚಾಯತಿ ಸಭಾಭವನದಲ್ಲಿ ಜರಗಿತು.

ನೋಡಲ್ ಅಧಿಕಾರಿಯಾಗಿ ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜ ನಾಯ್ಕ ವಹಿಸಿದ್ದರು.

ಬಟ್ಲಡ್ಕದಲ್ಲಿ ಅಕ್ರಮ ಮರಳುಗಾರಿಕೆ ಆಗುವುದರಿಂದ ನಮ್ಮ ರಸ್ತೆ ಎಲ್ಲಾ ಹಾಲಾಗಿದೆ ಪಂಚಾಯಿತಿಯಿಂದ ಸರಿ ಮಾಡಿಕೊಡಬೇಕು ಅವರಿಗೆ ಯಾಕೆ ಲೈಸನ್ಸ್ ಕೊಟ್ಟದ್ದು
ಎಂದು ಗ್ರಾಮಸ್ಥರು ಕೇಳಿದಾಗ ಪ್ರಶ್ನೆಗೆ ಉತ್ತರಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ್ ಮಾತನಾಡಿ ಪಂಚಾಯಿತಿಯಿಂದ ಮರಳುಗಾರಿಕೆಗೆ ಲೈಸೆನ್ಸ್ ಕೊಡಲು ಬರೋದಿಲ್ಲ ಅದು ಗಣಿಗಾರಿಕೆ ಯವರು ಲೈಸೆನ್ಸ್ ಕೊಡುವುದು.ಜನರೇ ಅದಕ್ಕೆ ವಿರೋಧ ಮಾಡಬೇಕು ಹೊರತು ಪಂಚಾಯಿತಿ ವಿರೋಧ ಮಾಡಲು ಆಗುವುದಿಲ್ಲ ಎಂದರು.

ಪುನರಡ್ಕದಲ್ಲಿ ಬೋರ್ವೆಲ್ ತೆಗೆದಿದ್ದೀರಿ ಪಂಪು ಹಾಕಿದ್ದೀರಿ ಆದರೆ ಅಲ್ಲಿ ನೀರಿಲ್ಲ.ಏನು ವ್ಯವಸ್ಥೆ ಕೈಗೊಂಡಿದ್ದೀರಿ ಎಂದು ಗ್ರಾಮಸ್ಥರು ಕೇಳಿದಾಗ ಅದಕ್ಕೆ ಉತ್ತರಿಸಿದ ಅಭಿವೃದ್ಧಿ ಅಧಿಕಾರಿ ಮೋಹನ್ ಮಾತನಾಡಿ ಅಲ್ಲಿ ಟ್ಯಾಂಕಿ ಮಾಡಲು ನಾವು ಜಾಗ ನೋಡಿದ್ದೇವೆ ಶೀಘ್ರ ವ್ಯವಸ್ಥೆ ಮಾಡುತ್ತೇವೆ ಎಂದರು.

ದಪ್ಪದಪಲ್ಕೆ ಎಂಬಲ್ಲಿ ಸೇತುವೆಯಾಗಿ ಮೂರು ವರ್ಷವಾಗಿದೆ. ಗ್ರಾಮಸ್ಥರಿಗೆ ಹೋಗಲು ಆಗುವುದಿಲ್ಲ. ಕೂಡಲೇ ವ್ಯವಸ್ಥೆ ಮಾಡಿ ಕೊಡಿ ಎಂದು ಗ್ರಾಮಸ್ಥರು ಹೇಳಿದಾಗ. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಇಂಜಿನಿಯರ್ ಮಾತನಾಡಿ ಎರಡು ಕಡೆ ಮಣ್ಣು ಹಾಕಿ ಶೀಘ್ರವಾಗಿ ರಸ್ತೆ ವ್ಯವಸ್ಥೆ ಮಾಡಿಕೊಡುತ್ತೇವೆ ಎಂದರು.

ಮೊಗ್ರು ಗ್ರಾಮಕ್ಕೆ ಯಾರು ಆಶಾ ಕಾರ್ಯಕರ್ತೆ ಗ್ರಾಮಕ್ಕೆ ಯಾಕೆ ಬರುವುದಿಲ್ಲ ಗ್ರಾಮಸಭೆಗೂ ಬರುತ್ತಿಲ್ಲ ಇದಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಹೇಳಿದಾಗ
ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಅಧಿಕಾರಿ ನಾನು ಬಂದು ಐದು ತಿಂಗಳ ಆಗಿದ್ದಷ್ಟೇ.ಇವತ್ತು ಕೇಳಿದಾಗ ಗ್ರಾಮ ಸಭೆಗೆ ನಾನು ಬರುವುದಿಲ್ಲ ನನಗೆ ಹುಷಾರಿಲ್ಲ ಅಂತ ಹೇಳಿದ್ದಾರೆ. ಅವರನ್ನು ಕರೆದು ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದರು.

ಈ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟವಾಗುತ್ತಿದೆ. ದೂರು ಕೊಟ್ಟರೆ. ಅವರ ಮೇಲೆ ಕ್ರಮ ಕೈಗೊಳ್ಳುವುದಿಲ್ಲ. ಯಾಕೆ ಎಂದು ಗ್ರಾಮಸ್ಥರು ಹೇಳಿದಾಗ
ಪ್ರಶ್ನೆಗೆ ಉತ್ತರಿಸಿದ ಅಬಕಾರಿ ಅಧಿಕಾರಿ.ನೀವು ದೂರು ಕೊಡಿ ನಾವು ಗೌಪ್ಯವಾಗಿ ಇಡುತ್ತೇವೆ ಖಂಡಿತವಾಗಿ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದರು.

ಸಭೆಯಲ್ಲಿ ಕಂದಾಯ ಇಲಾಖೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿ ..ಅರಣ್ಯ ಇಲಾಖೆ. ಅಬಕಾರಿ ಇಲಾಖೆ. ಕೃಷಿ ಇಲಾಖೆ ಆರೋಗ್ಯ ಇಲಾಖೆ .ಮೆಸ್ಕಾಂ ಇಲಾಖೆ. ಆರ್ಥಿಕ ಸಾಕ್ಷರತೆಯ ಬಗ್ಗೆ ಉಷಾ ರವರುಮುಂತಾದವರು ಸಭೆಗೆ ಮಾಹಿತಿ ನೀಡಿದರು.

ಪಂಚಾಯತ್ ಉಪಾಧ್ಯಕ್ಷ ಗಂಗಾಧರ, ಸದಸ್ಯರಾದ ದಿನೇಶ್ ಖಂಡಿಗ, ಸುಚಿತ್ರ, ಪವಿತ್ರ, ಚೇತನ, ಪುಷ್ಪ, ವಿಮಲಾ, ಮೋಹನ್, ಅನಿತಾ, ಭಾರತಿ, ಬಾಲಕೃಷ್ಣ ಗೌಡ, ಶಿವಗೌಡ, ಶಿವಪ್ರಸಾದ್, ಮಂಜುಶ್ರೀ, ಶಾಂತಾ, ಗ್ರಾ.ಪಂ ಸಿಬ್ಬಂದಿವರ್ಗದವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here