ಕುವೆಟ್ಟು ನಿವಾಸಿ ಕ್ಲೇವನ್ ಅವಿನ್ ರೊಡ್ರಿಗಸ್ ದುಬೈಯಲ್ಲಿ ಬೈಕ್ ಅಪಘಾತ ದಲ್ಲಿ ನಿಧನ

0

 

ಕುವೆಟ್ಟು: ಕುವೆಟ್ಟು ನಿವಾಸಿ ಕ್ಲೇವನ್ ಅವಿನ್ ರೊಡ್ರಿಗಸ್ (25) ದುಬೈಯಲ್ಲಿ ಬೈಕ್ ಅಪಘಾತ ವಾಗಿ ಮೃತ ಪಟ್ಟ ಘಟನೆ ಅ.11ರಂದು ನಡೆದಿದೆ.

ಕುವೆಟ್ಟು ಸರಕಾರಿ ಶಾಲೆಯ ಹತ್ತಿರದ ಸಿರಿಲ್ ರೊಡ್ರಿಗಸ್ ಮತ್ತು ಮೇರಿ ಮೊಂತೆರೋ ದಂಪತಿಯ ಪುತ್ರ.

ಮೃತರು 2ವರ್ಷ ಗಳ ಹಿಂದೆ ಮಡಂತ್ಯಾರು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ, ನಂತರ ನಿಟ್ಟೆ ಕಾಲೇಜಿನಲ್ಲಿ ಎಂ.ಬಿ.ಎ ಪದವಿ ಮುಗಿಸಿ ದುಬೈಗೆ ಹೋಗಿದ್ದು. 3ದಿನಗಳ ಹಿಂದೆಯಷ್ಟೆ ಇವರಿಗೆ ಉದ್ಯೋಗ ದೊರಕಿದ್ದು, ಉದ್ಯೋಗದಿಂದ ವಾಪಸಾಗುವ ಸಂದರ್ಭದಲ್ಲಿ ಇಬ್ಬರು ಬೈಕ್ ನಲ್ಲಿ ಚಲಿಸುವಾಗ ಬೈಕ್ ಅಪಘಾತ ವಾಗಿ ರಸ್ತೆ ಡಿವೈಡರ್ಗೆ ತಾಗಿ ಸ್ಥಳ ದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮೃತರು ತಂದೆ, ತಾಯಿ, ಸಹೋದರ ಅಜೇಯ್ ರೊಡ್ರಿಗಸ್ ಹಾಗೂ ಬಂದುವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here