ಉಜಿರೆ ಅಮೃತ್ ಟೆಕ್ಸ್‌ಟೈಲ್ಸ್ & ರೆಡಿಮೇಡ್ಸ್‌ನಲ್ಲಿ “ಅದೃಷ್ಟ ನಿಮ್ಮದು ಕೊಡುಗೆ ನಮ್ಮದು” ಲಕ್ಕಿ ಕೂಪನ್ ಬಿಡುಗಡೆ

0


ಉಜಿರೆ: ಅಮೃತ ಟೆಕ್ಸ್‌ಟೈಲ್ಸ್ ಮತ್ತು ರೆಡಿಮೇಡ್ಸ್ ಇಂದು ತಾಲೂಕಿನದಾದ್ಯಂತ ಮನೆ ಮಾತಾಗಿದ್ದ ಸಂಸ್ಥೆಯಾಗಿದ್ದು, ತಮ್ಮ ನಗು ಮುಖದ ಸೇವೆ. ವ್ಯವಹಾರದಲ್ಲಿ ಪಾರದರ್ಶಕತೆ-ಪ್ರಾಮಾಣಿಕತೆ ಹಾಗೂ ಗುಣಮಟ್ಟದ ವಸ್ತುಗಳನ್ನು ಯೋಗ್ಯ ಬೆಲೆಗೆ ಗ್ರಾಹಕರಿಗೆ ನೀಡುತ್ತಿದ್ದು, ಅರ್ಹವಾಗಿಯೇ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಶರತ್‌ಕೃಷ್ಣ ಪಡ್ವೆಟ್ನಾಯರು ಹೇಳಿದರು.

ಅವರು ಉಜಿರೆ ಅಮೃತ್ ಟೆಕ್ಸ್‌ಟೈಲ್ಸ್ ರೆಡಿಮೇಡ್ಸ್ ನಲ್ಲಿ ಅ. 13ರಂದು ದೀಪಾವಾಳಿ ಪ್ರಯುಕ್ತ ವಿಶೇಷ ಅದೃಷ್ಟ ನಿಮ್ಮದು ಕೊಡುಗೆ ನಮ್ಮದು ಎಂಬ ಕೂಪನನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಉದ್ಯಮಿ ವಿಜಯ ರತ್ನ ಪ್ರಶಸ್ತಿ ಪುರಸ್ಕೃತ, ಲಕ್ಷ್ಮೀ ಗ್ರೂಪ್‌ನ ಮಾಲಕ ಮೋಹನ್ ಕುಮಾರ್ ಮಾತನಾಡಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮತ್ತು ಕಡಿಮೆ ಬೆಲೆಗೆ ತ್ವರಿತ ಸೇವೆ ಜೊತೆಗೆ ಗ್ರಾಹಕರಿಗೆ ಕೊಡುಗೆಗಳನ್ನು ನೀಡಿದರೆ ಅಂತ ಕೊಡುಗೆ ಉಜಿರೆ ಅಮೃತ್ ಟೆಕ್ಸ್‌ಟೈಲ್ಸ್ ನಲ್ಲಿ ಸಿಗುತ್ತಿದೆ . ಇದರ ಪ್ರಯೋಜನವನ್ನು ಗ್ರಾಹಕರು ಪಡೆಯಬೇಕು ಎಂದರು.

ಈ ಸಂದರ್ಭದಲ್ಲಿ ಉದ್ಯಮಿಗಳಾದ ರಾಜೇಶ್ ಪೈ, ಮೋಹನ ಶೆಟ್ಟಿಗಾರ್, ಉದ್ಯಮಿ ರಾಜೇಶ್ ಶೆಟ್ಟಿ ನವಶಕ್ತಿ, ರವಿ ಚಕ್ಕಿತ್ತಾಯ, ಪದ್ಮನಾಭ ಶೆಟ್ಟಿಗಾರ್, ವಿಶ್ವನಾಥ್ ಶೆಟ್ಟಿಗಾರ್, ನವೀನ್‌ಚಂದ್ರ, ಡಾ| ದೀಪಾಲಿ, ಡಾ| ಶಾಜನ್, ಸ್ಮಿತಾ ಪ್ರಶಾಂತ್, ಸಂದೇಶ್ ಪ್ರದೀಪ್ ಶುಭ ಹಾರೈಸಿದರು. ಎಸ್ .ಡಿ. ಎಮ್. ಕಾಲೇಜ್ ಕ್ಷೇಮ ಪಾಲಕಾಧಿಕಾರಿ ಸೋಮಶೇಖರ್ ಶೆಟ್ಟಿ ಪ್ರಾಸ್ತವಿಕ ಮಾತನಾಡಿದರು.

ಅದೃಷ್ಟ ನಿಮ್ಮದು ಕೊಡುಗೆ ನಮ್ಮದು ನಾವು 6 ವರ್ಷಗಳಿಂದ ನಮ್ಮ ಮಳಿಗೆಯಲ್ಲಿ ದೀಪಾವಳಿ ಪ್ರಯುಕ್ತ ಆಚರಿಸುತ್ತಿವೆ. ರೂ.2000ಕ್ಕಿಂತ ಹೆಚ್ಚು ಬಟ್ಟೆಯ ಖರೀದಿ ಮಾಡಿದವರಿಗೆ ಉಚಿತ ಕೂಪನ್ ನೀಡಲಾಗುತ್ತಿದೆ. ಇದರಲ್ಲಿ 2500 ಬಹುಮಾನಗಳ್ಳಿದು, ನ.5ರತನಕ ಇದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿಸುತ್ತೇನೆ. ನಮ್ಮಲ್ಲಿ ಪ್ರಖ್ಯಾತ ಬ್ರ್ಯಾಂಡುಗಳ ಬಟ್ಟೆ ಆಯ್ಕೆ ಮಾಡುವ ಅವಕಾಶವಿದ್ದು.ಬಟ್ಟೆಗಳ ಗುಣಮಟ್ಟ ಆಕರ್ಷಕ ದರದಲ್ಲಿ ಲಭ್ಯವಿದೆ. ಮದುವೆಗಳಿಗೆ ಬೇಕಾದ ಬಟ್ಟೆಗಳ ಆಯ್ಕೆಗಳಿವೆ. ಗ್ರಾಹಕರು ವಿಜಯೋತ್ಸವದಲ್ಲಿ ಭಾಗವಹಿಸಿ ಅದೃಷ್ಟಶಾಲಿಗಳಾಗಿ ಎಂದು ಮಾಲಕರು ಪ್ರಶಾಂತ್ ಜೈನ್ ತಿಳಿಸಿದರು.

ಒಟ್ಟು 2500 ಬಹುಮಾನಗಳಿದ್ದು. ಅದರಲ್ಲಿ 7 ಕಾರುಗಳ ಬಂಪರ್ ಬಹುಮಾನ, 10 ದ್ವಿಚಕ್ರ ವಾಹನ, 10 ಎಲ್ .ಇ .ಡಿ ಟಿವಿ, 10 ರೆಪ್ರೀಜರೇಟರ್, 10 ಬೈಸಿಕಲ್, 10 ಮೂರು ಗ್ರಾಂ. ಚಿನ್ನದ ನಾಣ್ಯ, 140 ಒಂದು ಗ್ರಾಂ.ನ ಚಿನ್ನದ ನಾಣ್ಯ, 20 ಗ್ರೈಂಡರ್ 150 ಮಿಕ್ಸರ್, 250 ಎಲೆಕ್ಟ್ರಿಕಲ್ ಕೆಟಿಲ್, 30 ವಾಚ್, 90 ಇಂಡೆಕ್ಷನ್ ಸ್ಟವ್, 350 ಹಾಟ್ ಬಾಕ್ಸ್, 440 ಫ್ರೆಶರ್ ಕುಕ್ಕರ್, 260 ಗ್ಯಾಸ್ ಸ್ಟವ್, 370 ಕಾಪರ್ ನೀರಿನ ಬಾಟಲ್, 23 ಬೆಳ್ಳಿನಾಣ್ಯ, 10 ಸೇಫ್ ಲಾಕರ್‌ಗಳನ್ನು ಗ್ರಾಹಕರು ಪಡೆಯುವ ಅವಕಾಶವಿದ್ದು ಈ ಕೊಡುಗೆಗಳು ನ.5 ರವರೆಗೆ ನಡೆಯಲಿದೆ.

LEAVE A REPLY

Please enter your comment!
Please enter your name here