ಕೊಯ್ಯೂರು ಬಜೆಗುತ್ತು ಧರ್ಮದೈವಗಳ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಕೊಯ್ಯೂರು :ಕೊಯ್ಯೂರು ಗ್ರಾಮದ ಬಜೆಗುತ್ತು ಮನೆಯಲ್ಲಿ ಬಜೆಗುತ್ತು ಧರ್ಮದೈವಗಳ ನೇಮೋತ್ಸವ ಸಮಿತಿ ವತಿಯಿಂದ ಡಿ.8 ರಿಂದ 11 ರ ವರೆಗೆ ನಡೆಯಲಿರುವ
ಗಣಹೋಮ, ಶ್ರೀ ವೆಂಕಟರಮಣ ದೇವರ ಪೂಜೆ ನಾಗದೇವರ, ಸನ್ನಿಧಿಯಲ್ಲಿ ಆಶ್ಲೇಷಾ ಬಲಿ ಪೂಜೆ, ಧರ್ಮದೈವಗಳ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಬಜೆ ಗುತ್ತು ಮನೆಯಲ್ಲಿ ನಡೆಯಿತು.

ಕೊಯ್ಯೂರು ಶ್ರೀ ಪಂಚ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಅಶೋಕ್ ಕುಮಾರ್ ಅಗ್ರಸಾಲೆ ಬಿಡುಗಡೆ ಗೊಳಿಸಿ ಶುಭ ಹಾರೈಸಿದರು. ಬಜೆ ಗುತ್ತು ನೇಮೋತ್ಸವ ಸಮಿತಿಯ ಗೌರವ ಅಧ್ಯಕ್ಷ ಅಮ್ಮಿ ಪೂಜಾರಿ ಬಜೆಗುತ್ತು, ಅಧ್ಯಕ್ಷ ಜಗದೀಶ್‌ ಫುದ್ದೊಟ್ಟು, ಪ್ರಧಾನ ಸಂಚಾಲಕ ಬಿ. ಬಾಲಕೃಷ್ಣ ಪೂಜಾರಿ,ಕಾರ್ಯದರ್ಶಿ ನವೀನ್ ನೂಜಿ, ಕೋಶಾಧಿಕಾರಿ ಸುಜಾತಾ ಜಯಂತ ಬಜೆಗುತ್ತು, ಗುರ್ಕಾರ ಬೇಬಿ ಪೂಜಾರಿ ಜಾರ್ಲೊಟ್ಟು, ಸಮಿತಿಯ ಪದಾಧಿಕಾರಿಗಳು,ಉಪ ಸಮಿತಿಗಳ ಸಂಚಾಲಕರು, ಸದಸ್ಯರು, ಬಜೆಗುತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.

ಹಾಗೂ ಎಲ್ಲಾ ಸಮಿತಿಯ ಸಂಚಾಲಕರು, ಸರ್ವ ಸದಸ್ಯರು ಮತ್ತು ಬಜೆಗುತ್ತು ಮನೆಯ ಕುಟುಂಬಸ್ಥರ ಸವಿನಯ ಆಮಂತ್ರಣ

LEAVE A REPLY

Please enter your comment!
Please enter your name here