ಸೌತ್ ಕೆನರಾ ಫೋಟೊಗ್ರಾಫರ್ಸ್ ಅಸೋಸಿಯೇಷನ್ ದ ಕ ಉಡುಪಿ ಜಿಲ್ಲೆ ಬೆಳ್ತಂಗಡಿ ವಲಯ ವತಿಯಿಂದ ಡಾ|| ಡಿ ವೀರೇಂದ್ರ ಹೆಗ್ಗಡೆಯವರಿಗೆ ಗೌರವಾರ್ಪಣೆ

0

ಧರ್ಮಸ್ಥಳ: ಸೌತ್ ಕೆನರಾ ಫೋಟೊಗ್ರಾಫರ್ಸ್ ಅಸೋಸಿಯೇಷನ್ ದ ಕ ಉಡುಪಿ ಜಿಲ್ಲೆ ಬೆಳ್ತಂಗಡಿ ವಲಯದ ವತಿಯಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ |ಡಿ ವೀರೇಂದ್ರ ಹೆಗ್ಗಡೆಯವರ 55 ಪಟ್ಟಾಭಿಷೇಕ ವರ್ಧಂತ್ಯುತ್ಸವದ ಪ್ರಯುಕ್ತ ಅ24 ರಂದು ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವಲಯದ ಅಧ್ಯಕ್ಷ ಅಶೋಕ್ ಆಚಾರ್ಯ, ಉಪಾಧ್ಯಕ್ಷ ಪ್ರವೀಣ್ ಕೆದ್ದು ಕೋಶಾಧಿಕಾರಿ ಹರೀಶ್ ಕೊಳ್ತಿಗೆ, ಸೌತ್ ಕೆನರಾ ಫೋಟೊಗ್ರಾಫರ್ಸ್ ಅಸೋಸಿಯೇಷನ್ ದ ಕ ಉಡುಪಿ ಜಿಲ್ಲಾ ಪತ್ರಿಕಾ ಪ್ರತಿನಿಧಿ ಉಮೇಶ್ ಮದ್ದಡ್ಕ, ಎಸ್ ಕೆ ಪಿ ವಿವಿದೋಧ್ಧೇಶ ಸಹಕಾರಿ ಸಂಘದ ನಿರ್ದೇಶಕ ಕೆ ವಸಂತ್ ಶರ್ಮ ಉಜಿರೆ,  ವಲಯದ ಸ್ಥಾಪಕಾಧ್ಯಕ್ಷ ಪಾಲಾಕ್ಷ ಪಿ ಸುವರ್ಣ, ವಲಯದ ಮಾಜಿ ಅಧ್ಯಕ್ಷರು ಸುಂದರ್ ಕೆ ಬೆಳ್ತಂಗಡಿ, ಎನ್ ಎ ಗೋಪಾಲ್ ಅಳದಂಗಡಿ ಸದಸ್ಯರಾದ ಪ್ರಭಾಕರ ಧರ್ಮಸ್ಥಳ,  ಶಿವಪ್ಪ ಉಜಿರೆ, ವಿಶ್ವನಾಥ ಧರ್ಮಸ್ಥಳ ರಾಜೇಶ್ ಪಟ್ರಮೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here