ಪಿಲ್ಲ೦ಬುಗೋಳಿ: ದೀಪಾವಳಿ ಕ್ರೀಡಾಕೂಟದ ಉದ್ಘಾಟನೆ; ಕಣ್ಮನ ಸೆಳೆದ ದೋಸೆಹಬ್ಬ

0

ಆರಂಬೋಡಿ: ಶ್ರೀ ಪಂಚದುರ್ಗಾ ಗೆಳೆಯರ ಬಳಗ ಆರಂಬೋಡಿ ಇದರ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ”ಅನಾರೋಗ್ಯ ಪೀಡಿತ ಬಡ ಕುಟುಂಬಗಳಿಗೆ ಸಹಾಯಾರ್ಥ”ದೀಪಾವಳಿ ಟ್ರೋಫಿ”ಕ್ರೀಡಾಕೂಟ ಪಿಲಂಬುಗೋಳಿ ಶಾಲಾ ಮೈದಾನದಲ್ಲಿ ಜರುಗಿತು.

ಶ್ರೀ ಕೃಷ್ಣಪ್ರಸಾದ್ ಆಚಾರ್ಯ, ಅಸ್ರಣ್ಣರು ಶ್ರೀ ಕ್ಷೇತ್ರ ಪೂಂಜ ದೀಪ ಬೆಳಗಿಸಿ ಉದ್ಘಾಟಿಸಿ, ಶುಭ ಹಾರೈಸಿದರು. ದೋಸೆ ಹಬ್ಬವನ್ನು ಆರಂಬೋಡಿ ಗ್ರಾಮ ಪಂಚಾಯತ್ ಅಧ್ಯಕ್ಷರು ವಿಜಯ ಕುಂಜಾಡಿ ಚಾಲನೆ ನೀಡಿದರು. ವೇದಿಕೆಯಲ್ಲಿ ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಆಶಾ. ಎಸ್. ಶೆಟ್ಟಿ, ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಶಶಿಧರ್ ಶೆಟ್ಟಿ, ಪಿಲಂಬುಗೋಳಿ ಶಾಲಾಭಿವೃದಿ ಅಧ್ಯಕ್ಷರು ಅಬ್ದುಲ್ ರಹಿಮಾನ್, ನವೀನ್ ಪೂಜಾರಿ ಮೈರಬೆಟ್ಟು,ಕಾರ್ಯಕ್ರಮ ಆಯೋಜರು ಹಾಗೂ ಕರ್ನಾಟಕ ಕ್ರೀಡಾರತ್ನ ಪುರಸ್ಕಾರ ಪಡೆದ ಸುರೇಶ್. ಎಂ. ಶೆಟ್ಟಿ ಹಕ್ಕೇರಿ, ಹಾಗೂ ವಿವಿಧ ಗಣ್ಯರು ಉಪಸ್ಥಿತರಿದ್ದರು.

ನಂತರ ನಡೆದ ಕ್ರೀಡಾಕೂಟದಲ್ಲಿ, 30ಗಜಗಳ ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಥಮ:ಓಂ ಫ್ರೆಂಡ್ಸ್ ಪೂಂಜ, ದ್ವಿತೀಯ:ಪಂಚದುರ್ಗಾ ಪಿಲಂಬು, ವಾಲಿಬಾಲ್:ಪ್ರಥಮ:ಪಂಚದುರ್ಗಾ ಹೊಕ್ಕಾಡಿಗೋಳಿ, ದ್ವಿತೀಯ:ಕೆ.ಕೆ. ಫ್ರೆಂಡ್ಸ್ ಕೈರೋಡಿ, ಹಗ್ಗಜಗ್ಗಾಟ:ಪ್ರಥಮ:ಕೆ. ಕೆ. ಫ್ರೆಂಡ್ಸ್ ಕೈರೋಡಿ, ದ್ವಿತೀಯ:ಪಂಚದುರ್ಗಾ ಪಿಲಂಬು ಗಳಿಸಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಆರಂಬೋಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಪ್ರಭಾಕರ್. ಎಚ್. ಹಾಗೂ ವಿವಿಧ ಗಣ್ಯರು ಉಪಸ್ಥಿತರಿದ್ದರು.

ಪ್ರವೀಣ್ ಹೊಸಂಗಡಿ ಕಾರ್ಯಕ್ರಮ ನಿರೂಪಿಸಿ, ಪ್ರದೀಪ್ ಪಾಣಿಮೇರು ಸ್ವಾಗತಿಸಿ, ದಯಾನಂದ ಭಂಡಾರಿ ಧನ್ಯವಾದ ನೀಡಿದರು.

LEAVE A REPLY

Please enter your comment!
Please enter your name here