ದಿನೇಶ್ ನಿಡ್ಡಾಜೆ ಜರ್ಮನಿ ಪ್ರವಾಸ

0

 

 

ಬೆಳ್ತಂಗಡಿ:ಬೆಂಗಳೂರಿನ ಪ್ರತಿಷ್ಠಿತ ಗ್ಲೋಬಲ್ ಕ್ಯಾಲ್ಸಿಯಂ ಕಂಪನಿಯಲ್ಲಿ ಸೀನಿಯರ್ ಸೈಂಟಿಫಿಕ್ ಮ್ಯಾನೇಜರ್ ರೀಸರ್ಚ್ & ಡೆವಲಪ್ಮೆಂಟ್ ಆಗಿರುವ ದಿನೇಶ್ ನಿಡ್ಡಾಜೆಯವರು ನ. 1ರಿಂದ ನ. 4ರ ತನಕ ಜರ್ಮನಿಯ ಪ್ರಾಂಕ್ ಫರ್ಟ್ ನಲ್ಲಿ ನಡೆಯಲಿರುವ ಔಷಧೀಯ ಪದಾರ್ಥಗಳ ಸಮಾವೇಶದಲ್ಲಿ ಪಾಲ್ಗೊಳ್ಳಲು ಅ. 31ರಂದು ವಿದೇಶ ಪ್ರವಾಸ ಬೆಳೆಸಲಿದ್ದಾರೆ.
ಮಚ್ಚಿನ ಗ್ರಾಮದ ನಿಡ್ಡಾಜೆ ಕೃಷಿಕರಾದ ರಾಮಣ್ಣ ಗೌಡ ಮತ್ತು ವೀರಮ್ಮ ದಂಪತಿಯ ಪುತ್ರರಾದ ದಿನೇಶ್ ನಿಡ್ಡಾಜೆಯವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ನಾಳ ಸ.ಹಿ.ಪ್ರಾ.‌ ಶಾಲೆಯಲ್ಲಿ ಪೂರೈಸಿ, ಗೇರುಕಟ್ಟೆ ಸರಕಾರಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ, ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಪಿ.ಯು ಹಾಗೂ ಬಿ.ಎಸ್ಸಿ ಪದವಿಯನ್ನು ಮುಗಿಸಿದರು. ಬಳಿಕ ಮಂಗಳೂರು ವಿಶ್ವವಿದ್ಯಾನಿಲಯದಿಂದ ರಸಾಯನಶಾಸ್ತ್ರ ವಿಷಯದಲ್ಲಿ ಎಂ.ಎಸ್ಸಿ ಪದವಿಯನ್ನು ಪಡೆದು ಬೆಂಗಳೂರಿನ ಪ್ರತಿಷ್ಠಿತ ಔಷಧ ಕಂಪನಿಗಳಾದ ಬಯೋಕಾನ್, ಆಂಥಮ್, ಬಯೋ ಸೈನ್ಸ್‌ ನಲ್ಲಿ ವಿಜ್ಞಾನಿಯಾಗಿ, ಸೀನಿಯರ್ ವಿಜ್ಞಾನಿ, ಮ್ಯಾನೇಜರ್ ಹುದ್ದೆಗಳನ್ನು ನಿಭಾಯಿಸಿದ್ದರು. ಇವರ ಪತ್ನಿ ಶ್ರೀಮತಿ ರೂಪಶ್ರೀ ಬೊಳ್ಳೂರು ಗೃಹಿಣಿಯಾಗಿದ್ದಾರೆ. ಪುತ್ರಿಯರಾದ ಕು. ಕು. ಲಹರಿ ಎನ್.ಡಿ ಮತ್ತು ಕು. ಸಶ್ಮಿತಾ ಎನ್.ಡಿ. ವಿದ್ಯಾರ್ಥಿಗಳಾಗಿದ್ದಾರೆ.

LEAVE A REPLY

Please enter your comment!
Please enter your name here