ಅನಾರೋಗ್ಯದಿಂದ ವಿಶ್ರಾಂತಿಯಲ್ಲಿರುವ ಶೇಖರ ಪೂಜಾರಿ ಅರ್ಬಿ ಮತ್ತು ಸುನಂದಾ ದೇವಾಡಿಗ ಗಾನದಕೊಟ್ಟಿಗೆ ಇವರಿಗೆ ಶ್ರೀ ಉಳ್ಳಾಲ್ತಿ ಗೆಳೆಯರ ಬಳಗ ಆರಂತಬೈಲು,ತೋಟತ್ತಾಡಿ ವತಿಯಿಂದ ಚಿಕಿತ್ಸಾ ನೆರವು

0

ಬೆಳ್ತಂಗಡಿ:  ಶ್ರೀ ಉಳ್ಳಾಲ್ತಿ ಗೆಳೆಯರ ಬಳಗ ಆರಂತಬೈಲು,ತೋಟತ್ತಾಡಿ ಇದರ 35ನೇ ಸೇವಾ ಯೋಜನೆಯನ್ನು ಅನಾರೋಗ್ಯದಿಂದ ವಿಶ್ರಾಂತಿಯಲ್ಲಿರುವ ಶೇಖರ ಪೂಜಾರಿ ಅರ್ಬಿ ಮತ್ತು ಸುನಂದಾ ದೇವಾಡಿಗ ಗಾನದಕೊಟ್ಟಿಗೆ ಇವರಿಗೆ ತಲಾ 7000 ಮೊತ್ತದ  ಚೆಕ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಉಳ್ಳಾಲ್ತಿ ಭಜನಾ ಮಂದಿರ ಆರಂತಬೈಲು ಇದರ ಅಧ್ಯಕ್ಷರಾದ ದಿವಾಕರ ಪೂಜಾರಿ ವಲಚ್ಚಿಲ್,ಶ್ರೀ ಉಳ್ಳಾಲ್ತಿ ಗೆಳೆಯರ ಬಳಗದ ಅಧ್ಯಕ್ಷರಾದ ಪ್ರವೀಣ್ ಪೂಜಾರಿ ಹೊಸಮನೆ, ಕಾರ್ಯದರ್ಶಿ ನಾರಾಯಣ ಶೆಟ್ಟಿ ಕುಡೆಂಚ, ಪದಾಧಿಕಾರಿಗಳಾದ ಗಣೇಶ್ ಪೂಜಾರಿ ಕುಡೆಂಚ,ಅವಿನಾಶ್ ಕೊಪ್ಪಳ,ಹರ್ಷೇಂದ್ರ ಕುಮಾರ್ ಅರಮನೆ ‘ದಿವಾಕರ ಪೂಜಾರಿ ಪರಪಿತ್ತಿಲು ‘ಸನತ್ ಕುಮಾರ್ ಮೂರ್ಜೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here