ರೋಟರಿ ಕ್ಲಬ್ ವತಿಯಿಂದ ಹಿರಿಯ ವೈದ್ಯ ಡಾ.ಎಸ್.ಎಸ್.ಚಾತ್ರರಿಗೆ ಅಭಿನಂದನೆ

0

ಉಜಿರೆ :ಕಳೆದ 4 ದಶಕಗಳಿಂದಲೂ ಹೆಚ್ಚು ಕಾಲದಿಂದ ಉಜಿರೆಯಲ್ಲಿ ಜನಪ್ರಿಯ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು ಇದೀಗ ತನ್ನ ವೃತ್ತಿಯಿಂದ ನಿವೃತ್ತರಾಗಿ ಮಂಗಳೂರಿನಲ್ಲಿ ನೆಲೆಸಲು ನಿರ್ಧರಿಸಿರುವ ಡಾ.ಎಸ್.ಎಸ್.ಚಾತ್ರ ಅವರನ್ನು ರೋಟರಿ ಕ್ಲಬ್ ವತಿಯಿಂದ ಅಭಿನಂದಿಸಲಾಯಿತು.

ಈ ಸಂಧರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷೆ, ಮನೋರಮಾ ಭಟ್, ಕಾರ್ಯದರ್ಶಿ ರಕ್ಷಾ ರಾಘ್ನೀಶ್, ಡಿ.ಎಂ ಗೌಡ, ಶ್ರೀಧರ ಕೆ.ವಿ, ಅಬ್ಬೂಬಕ್ಕರ್,ಡಾ.ಭಾರತಿ ,ಸುಜಾತ ಅಣ್ಣಿ ಪೂಜಾರಿ  ವಿದ್ಯಾಕುಮಾರ ಕಾಂಚೋಡು, ಅಣ್ಣಿ ಪೂಜಾರಿ, ಅರವಿಂದ ಕಾರಂತ್, ಮತ್ತಿತರು ಉಪಸ್ಥಿತರಿದ್ದರು.

ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಡಾ.ಚಾತ್ರ ರವರು ತನ್ನ ವೃತ್ತಿ ಜೀವನದ ಆರಂಭದ ದಿ‌ನಗಳಲ್ಲಿ  ಯಾವುದೇ ಅಸ್ಪತ್ರೆಗಳು ಅಥವಾ ಸ್ಪೆಷಲಿಸ್ಟ್ ಗಳು ಇಲ್ಲದ ದಿನಗಳಲ್ಲಿ ತುರ್ತು ಸಂಧರ್ಭದಲ್ಲಿ   ಅಪರಾತ್ರಿಯಲ್ಲೂ ತಾಲೂಕಿನ ಮೂಲೆ ಮೂಲೆಗಳಿಗೆ   ರೋಗಿಗಳ  ಮನೆಗೆ ತೆರಳಿ ಶ್ರುಶ್ರೂಷೆ ಕೊಡುತ್ತಿದ್ದ  ದಿನಗಳನ್ನು ನೆನಪಿಸಿಕೊಂಡರು.

LEAVE A REPLY

Please enter your comment!
Please enter your name here