ಬೆಳ್ತಂಗಡಿ: ವಾಣಿ ಪದವಿ ಪೂರ್ವ ಕಾಲೇಜು, ಬೆಳ್ತಂಗಡಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ರೋವರ್ಸ್ ಮತ್ತು ರೆಂಜರ್ಸ್ ಘಟಕ ಪಟ್ಟಣ ಪಂಚಾಯತ್ ಬೆಳ್ತಂಗಡಿ ಇವರ ಸಹಯೋಗದಲ್ಲಿ ಕ್ಲೀನ್ ಇಂಡಿಯಾ ಅಭಿಯಾನ 

0

ಬೆಳ್ತಂಗಡಿ:  ವಾಣಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ರೋವರ್ಸ್ ರೆಂಜರ್ಸ್ ಘಟಕ ಪಟ್ಟಣ ಪಂಚಾಯತ್ ಬೆಳ್ತಂಗಡಿ ಸಹಯೋಗದಲ್ಲಿ ಕ್ಲೀನ್ ಇಂಡಿಯಾ ಅಭಿಯಾನ ಅ.28ರಂದು ಕೈಗೊಂಡಿತ್ತು.

ಇದರ ಸಾಂಕೇತಿಕ ಉದ್ಘಾಟನೆಯು ವಾಣಿ ಶಿಕ್ಷಣ ಸಂಸ್ಥೆಗಳ ಕ್ರೀಡಾಂಗಣದಲ್ಲಿ ಪಟ್ಟಣ ಪಂಚಾಯತ್ ಮುಖ್ಯ ಕಾರ್ಯಕ್ರಮ ನಿರ್ವಾಹನಾಧಿಕಾರಿ  ರಾಜೇಶ್ ಕೆ ಇವರು ನೆರವೇರಿಸಿದರು.

ವಾಣಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಯದುಪತಿ ಗೌಡ ಕ್ಲೀನ್ ಇಂಡಿಯಾ ಅಭಿಯಾನದ ಅಗತ್ಯತೇಯ ಬಗ್ಗೆ ತಿಳಿಸಿದರು. ಪಟ್ಟಣ ಪಂಚಾಯತಿನ ಉಪಾಧ್ಯಕ್ಷರಾದ  ಜಯನಂದ ಗೌಡ ಉಪಸ್ಥಿತರಿದ್ದರು.

ಹಳೆಕೋಟೆ ಪರಿಸರದಿಂದ ಅಭಿಯಾನ ಹೊರಟು ಬೆಳ್ತಂಗಡಿ ಬಸ್ಸು ನಿಲ್ದಾಣ ಮೂಲಕ ಪಟ್ಟಣ ಪಂಚಾಯತ್ ಕಾರ್ಯಾಲಯದಲ್ಲಿ ಸ್ವಯಂಸೇವಕರು ಸಂಗ್ರಹಿಸಿದ ಕಸಗಳನ್ನು ಪಟ್ಟಣ ಪಂಚಾಯತಿನ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.

LEAVE A REPLY

Please enter your comment!
Please enter your name here