ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಹಾಗೂ ಸಂಸ್ಥೆಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಆರೋಪ: ಸೋಮನಾಥ ನಾಯಕ್ ಕೋಟಿ೯ಗೆ ಶರಣು

0

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಹಾಗೂ ಸಂಸ್ಥೆಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಿಕ ಸೇವಾ ಟ್ರಸ್ಟ್ ನ ಅಧ್ಯಕ್ಷರಾಗಿರುವ ಸೋಮನಾಥ್ ನಾಯಕ್ ಅವರಿಗೆ ನ್ಯಾಯಾಲಯ ಮೂರು ತಿಂಗಳ ಜೈಲು ಶಿಕ್ಷೆ ನೀಡಿದ್ದು, ಸುಪ್ರೀಂ ಕೋರ್ಟ್ ನಲ್ಲಿ ಅವರ ಮೇಲ್ಮನವಿ ವಜಾ ಗೊಂಡಿರುವುದರಿಂದ ಅವರು ಇಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಶಾಸಕ ವಸಂತ ಬಂಗೇರ, ಲಕ್ಷ್ಮೀಶ ತೋಳ್ಪಾಡಿ, ರಂಜನ್ ರಾವ್, ವಿದ್ಯಾ ನಾಯಕ್, ಬಿಎಂ ಭಟ್, ಸಿ.ಕೆ ಚಂದ್ರಕಲಾ, ಬಾಬು, ನೇಮಿರಾಜ್ ಕಿಲ್ಲೂರು, ಪರಮೇಶ್ವರ್, , ಸಂಜೀವ, ದಯಾನಂದ ಪೂಜಾರಿ, ಮಂಜುನಾಥ ಎಲ್ ಹಾಗೂ ನಾಗರಿಕ ಸೇವಾ ಟ್ರಸ್ಟ್ ನ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here