ಪುಂಜಾಲಕಟ್ಟೆ ವಲಯ ಮಟ್ಟದ ಕ್ರೀಡಾಕೂಟ: ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆ ಪ್ರೌಢಶಾಲಾ ವಿಭಾಗಕ್ಕೆ ಪ್ರಶಸ್ತಿಗಳ ಗರಿ

0

ಪುಂಜಾಲಕಟ್ಟೆ: ಪುಂಜಾಲಕಟ್ಟೆ ವಲಯ ಮಟ್ಟದ ಕ್ರೀಡಾಕೂಟವು ಸರ್ಕಾರಿ ಪ್ರೌಢಶಾಲೆ ಪುತ್ತಿಲದ ನೇತೃತ್ವದಲ್ಲಿ ನಡೆಯಿತು.

ಈ ಕ್ರೀಡಾಕೂಟದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಪೂಂಜಾಲಕಟ್ಟೆ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.

ಮಹಮ್ಮದ್ ಹಾರೀಸ್ -ತ್ರಿವಿಧ ಜಗಿತ-ಪ್ರಥಮ, ಉದ್ದ ಜಿಗಿತ- ದ್ವಿತೀಯ, ರಿಲೇ -ತೃತೀಯ, ಧೀರಜ್–ಉದ್ದ ಜಿಗಿತ ಪ್ರಥಮ, ಕಿಶನ್–ಗುಂಡುಎಸೆತ, ಚಕ್ರ ಎಸೆತ ಪ್ರಥಮ, ಉಮಾರುನ್ ಫಾರೂಕ್- ಗುಂಡು ಎಸೆತ, ಚಕ್ರ ಎಸೆತ- ದ್ವಿತೀಯ, ರಾಹುಲ್ ಬ್ಯಾಕೋಡ್ – ಈಟಿ ಎಸೆತ -ದ್ವಿತೀಯ, ರಿಲೇ-ತೃತೀಯ, ಸೀತಾರಾಮ -ರಿಲೇ- ತೃತೀಯ, ಸಾತ್ವಿಕ್-ರೀಲೆ ತೃತೀಯ, ಅಕ್ಷಿತಾ-200 ಮೀಟರ್ ಓಟ ಪ್ರಥಮ, 100 ಮೀಟರ್ ಹಾಗೂ ರಿಲೇ ದ್ವಿತೀಯ, ಶರಣ್ಯ– ತ್ರೀವಿಧ ಜಿಗಿತ-ಪ್ರಥಮ, ಉದ್ದ ಜಿಗಿತ ಮತ್ತು ರಿಲೇ ದ್ವಿತೀಯ, ಸಲ್ಮಾ ಶಹನಾಝ್ -ಉದ್ದ ಜಿಗಿತ ಪ್ರಥಮ, ರಿಲೇ ದ್ವಿತೀಯ, ಕೀರ್ತನ- ಎತ್ತರ ಜಿಗಿತ ಪ್ರಥಮ, ಚೇತನ ರೂಪ – ಚಕ್ರ ಎಸೆತ ಪ್ರಥಮ, ಸನ್ನಿಧಿ – ತ್ರಿವಿಧ ಜಿಗಿತ ದ್ವಿತೀಯ, ಶರಣ್ಯ- ರಿಲೇ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.

ಈ ವಿದ್ಯಾರ್ಥಿಗಳಿಗೆ ಸಂಸ್ಥೆಯ ಉಪ ಪ್ರಾಂಶುಪಾಲರಾದ ಉದಯಕುಮಾರ್ ಬಿ ಇವರ ಮಾರ್ಗದರ್ಶನ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಸತ್ಯಕಿರಣ ಕುಮಾರ್ ರವರ ನಿರ್ದೇಶನದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಯಶಸ್ವಿಗೊಳಿಸಿರುತ್ತಾರೆ.

LEAVE A REPLY

Please enter your comment!
Please enter your name here