ಅಳದಂಗಡಿ ಸೋಮನಾಥೇಶ್ವರಿ ದೇವಸ್ಥಾನದ ವಠಾರದಲ್ಲಿ, ಹತ್ತನೇ ವರ್ಷದ ಪಾದಯಾತ್ರೆ ಪೂರ್ವ ತಯಾರಿಗಳ ಬಗ್ಗೆ ವಲಯ ಮಟ್ಟದ ಪೂರ್ವಭಾವಿ ಸಭೆ

0

ಅಳದಂಗಡಿ:  ಇದೇ ಬರುವ 19ರಂದು ಉಜಿರೆಯಿಂದ ಧರ್ಮಸ್ಥಳಕ್ಕೆ ಹತ್ತನೇ ವರ್ಷದ ಪಾದಯಾತ್ರೆ ಪೂರ್ವ ತಯಾರಿಗಳ ಬಗ್ಗೆ ವಲಯ ಮಟ್ಟದ ಪೂರ್ವಭಾವಿ ಸಭೆಯು ಅಳದಂಗಡಿ ಸೋಮನಾಥೇಶ್ವರಿ ದೇವಸ್ಥಾನದ ವಠಾರದಲ್ಲಿ ನ.7ರಂದು ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಜನ ಜಾಗೃತಿ ವೇದಿಕೆಯ ಅಧ್ಯಕ್ಷರಾದ  ಪ್ರಮೋದ್ ಕುಮಾರ್ ಜೈನ್ ವಹಿಸಿದ್ದರು.

ಗುರುವಾಯನಕೆರೆ ತಾಲೂಕು ಯೋಜನಾಧಿಕಾರಿ  ಯಶವಂತ ,  ಜನ ಜಾಗೃತಿ ವೇದಿಕೆಯ ನಿಕಟ ಪೂರ್ವ ಅಧ್ಯಕ್ಷರುಗಳಾದ  ಸದಾನಂದ ಉಂಗಿಲ ಬೈಲು ಹಾಗೂ ವಿಶ್ವನಾಥ್ ಹೊಳ್ಳ ಸಮಯೋಚಿತವಾಗಿ ಮಾತನಾಡಿದರು.

ವೇದಿಕೆಯಲ್ಲಿ ವ್ಯವಸಾಯ ಬ್ಯಾಂಕಿನ ಮಾಜಿ ಅಧ್ಯಕ್ಷ  ಶುಭಾಷ್ ಚಂದ್ರ ರೈ,  ಪ್ರಗತಿಪರ ಕೃಷಿಕರಾದ  ಗಂಗಾಧರ ಮಿತ್ತಮಾರ್ ,  ಸೋಮನಾಥ ಬಂಗೇರ,  ಗುಣವತಿ ಅಮ್ಮ ಜೈನ್,  ವಲಯ ಮೇಲ್ವಿಚಾರಕಿ  ಸುಮಂಗಲ,  ಒಕ್ಕೂಟಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಜನಜಾಗೃತಿ ವೇದಿಕೆಯ ಗ್ರಾಮ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ನವಜೀವನ ಸಮಿತಿಯ ಸದಸ್ಯರ ಭಜನಾ ಮಂಡಳಿಯ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಊರಿನ ಗಣ್ಯರು, ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು, ವಿಪತ್ತು ನಿರ್ವಹಣಾ ಸ್ವಯಂಸೇವಕರು, ಸ್ವಚ್ಛತಾ ಸೇನಾ ನಿಗಳು, ತರಬೇತಿ ಸಹಾಯಕರು ಹಾಗೂ ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು.

ಪ್ರಮೋದ್ ಕುಮಾರ್ ಜೈನ್ ಅವರು ನವೆಂಬರ್ ಒಂದರಂದು ಉಜಿರೆಯಲ್ಲಿ ನಡೆದ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯಗಳ ಕುರಿತು ವಿವರಿಸಿದರು. ಕನಿಷ್ಠ ಒಂದು ಒಕ್ಕೂಟದಿಂದ 200 ಜನರಿಗೆ ಕಡಿಮೆಯಾಗದಂತೆ ಪಾದಯಾತ್ರೆಯಲ್ಲಿ ಭಾಗವಹಿಸುವುದೆಂದು ಪಾದಯಾತ್ರೆಯ ನಿಯಮಗಳನ್ನು ಯಥಾವತ್ತಾಗಿ ಪಾಲಿಸುವುದೆಂದು ನಿರ್ಧರಿಸಲಾಯಿತು ಉಜಿರೆಯವರೆಗೆ ಹೋಗಲು ವಾಹನ ವ್ಯವಸ್ಥೆ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಒಕ್ಕೂಟ ಮಟ್ಟದಲ್ಲಿ ಇನ್ನೊಂದು ಸುತ್ತಿನ ಸಭೆಯನ್ನು ನಡೆಸುವುದಾಗಿ ತೀರ್ಮಾನಿಸಲಾಯಿತು.
ಸ್ವಾಗತದೊಂದಿಗೆ ಪ್ರಾರಂಭವಾದ ಸಭೆ ಧನ್ಯವಾದ ಸಮರ್ಪಣೆಯೊಂದಿಗೆ ಮುಕ್ತಾಯಗೊಂಡಿತು.

LEAVE A REPLY

Please enter your comment!
Please enter your name here