ರಕ್ತೇಶ್ವರಿಪದವು ಶಾಲಾ ಸಹ ಶಿಕ್ಷಕಿಯಿಂದ ವಿಧ್ಯಾರ್ಥಿಗೆ ಮನಬಂದಂತೆ ಥಳಿತ: ಪೋಷಕರಿಂದ ದೂರು

0


ನ್ಯಾಯತರ್ಪು : ಇಲ್ಲಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ 2 ನೇ ತರಗತಿ ವಿಧ್ಯಾರ್ಥಿಗೆ ಸಹ ಶಿಕ್ಷಕಿ ಥಳಿತಿಸಿದ ಘಟನೆ ನಂ.9 ನಡೆಯಿತು.

ರಕ್ತೇಶ್ವರಿಪದವು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ 2 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಕ್ಷಯ ಗೌಡ ಪಿ. ಬಾಲಕನಿಗೆ ಕ್ಷುಲ್ಲಕ ಕಾರಣಕ್ಕೆ ಸ್ಟೀಲ್ ಸ್ಕೇಲ್ ನಿಂದ ಹಲ್ಲೆ ಮಾಡಿದ್ದು,  ಮನೆಯಲ್ಲಿ ಪೋಷಕರಿಗೆ ತಿಳಿಸಿದರೆ ನಾಳೆ ಇದಕ್ಕಿಂತಲೂ ಜಾಸ್ತಿ ಪೆಟ್ಟು ತಿನ್ನುತ್ತೀಯಾ ಎಂದು ಜೀವ ಬೆದರಿಕೆಯನ್ನು ಹಾಕಿದ್ದಾರೆ.

ರಾತ್ರಿಯ ವೇಳೆ ತಾಯಿ ಮಗನನ್ನು ಸ್ಥಾನ ಮಾಡಿಸುವಾಗ ಬೆನ್ನಿನ ಮೇಲೆ ರಕ್ತ ಹೆಪ್ಪುಗಟ್ಟಿದ ಬಾಸುಂಡೆ ಸ್ಥಿತಿಯನ್ನು ಗಮನಿಸಿ ತಕ್ಷಣ ಶಿಕ್ಷಕಿಗೆ ಪೋನ್ ಕರೆ ಮಾಡಿ ವಿಚಾರಿಸಿ,ಬೆಳ್ತಂಗಡಿ ಸಾರ್ವಜನಿಕ ಶಿಕ್ಷಣ ಇಲಾಖಾ ಸಂಪನ್ಮೂಲ ವ್ಯಕ್ತಿಯವರಿಗೆ ದೂರು ನೀಡಿದರು. ಅಧಿಕಾರಿ ವರ್ಗದವರು ಶಿಕ್ಷಕಿಯನ್ನು ವಿಚಾರಿಸಿದಾಗ ಪೋಷಕರಲ್ಲಿ ಮತ್ತು ಅಧಿಕಾರಿ ವರ್ಗದವರಲ್ಲಿ ತಪ್ಪೊಪ್ಪಿಕೊಂಡರು ಎಂಬುದಾಗಿ ತಡವಾಗಿ ಬೆಳಕಿಗೆ ಬಂದಿದೆ.

LEAVE A REPLY

Please enter your comment!
Please enter your name here