ನಾರಾವಿ ಗ್ರಾಮದ ಅರಸಿಕಟ್ಟೆಯಲ್ಲಿ ಮನೆಗೆ ನುಗ್ಗಿದ ಕಳ್ಳರು

0

ನಾರಾವಿ ಗ್ರಾಮದ ಅರಸಿಕಟ್ಟೆ ಶಿವಪ್ರಭಾ ರವರ ಮನೆಗೆ   ನಾಲ್ಕು ಜನ  ದುಷ್ಕರ್ಮಿಗಳು ಏಕಾಏಕಿ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ನಗ-ನಗದನ್ನು ಕಳವುಗೈದಿರುವ ಬಗ್ಗೆ  ನ.12ರಂದು ನಡೆದಿದೆ.

ಮನೆಯಲ್ಲಿ ಒಬ್ಬಂಟಿಯಾಗಿರುವ ಸಮಯ ಮಹಿಳೆಯ  ಕೈಗಳನ್ನು ಮತ್ತು ಕಾಲುಗಳನ್ನು ಹಗ್ಗದಿಂದ ಕಟ್ಟಿ  ಕುತ್ತಿಗೆಯಲ್ಲಿದ್ದ ಒಂದು ಚಿನ್ನದ ಸರ, ಕಿವಿಯಲ್ಲಿದ್ದ ಒಂದು ಜೊತೆ ಬೆಂಡೋಲೆಯನ್ನು ಬಲಾತ್ಕಾರವಾಗಿ ತೆಗೆದು, ಕೊಸರಾಡಿಕೊಂಡು ತನ್ನ ಕೈಗೆ ಮತ್ತು ಕಾಲಿಗೆ ಕಟ್ಟಿದ ಹಗ್ಗವನ್ನು ಬಿಡಿಸಿಕೊಂಡು ತನ್ನ ಸಂಬಂಧಿಕರಿಗೆ ದೂರವಾಣಿ ಕರೆ ಮಾಡಿ ತಿಳಿಸಿ ಅವರು ಬಂದ ಬಳಿಕ ಮನೆಯ ಒಳಗೆ ಹೋಗಿ ನೋಡಲಾಗಿ ಬೆಡ್ ರೂಮ್ ನಲ್ಲಿ ಬೆಡ್ ನ ಕೆಳಗೆ ಇರಿಸಿದ್ದ 3 ಚಿನ್ನದ ಬಳೆಗಳು,3 ಚಿನ್ನದ ಉಂಗುರಗಳು , ಮೂರು ಎಲೆಯ ಚಿನ್ನದ ಚೈನ್ ಹಾಗೂ ಒಂದು ಮೊಬೈಲ್ ಕೂಡಾ ದೋಚಿರುವುದು ಕಂಡು ಬಂದಿರುತ್ತದೆ.  ಆರೋಪಿತರು ದೋಚಿದ ಚಿನ್ನದ ಅಂದಾಜು ಮೌಲ್ಯ ಒಟ್ಟು 4,60,000 ಎಂದು ಅಂದಾಜಿಸಲಾಗಿದೆ.

LEAVE A REPLY

Please enter your comment!
Please enter your name here