ಶೌರ್ಯ ಸ್ವಯಂ ಸೇವಕರಿಂದ ರಸ್ತೆ ಇಕ್ಕೆಲಗಳಲ್ಲಿ ಸ್ವಚ್ಚತಾ ಕಾರ್ಯ

0

 

ಕಣಿಯೂರು : ನ 13ರಂದು  ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣೆ ಸಮಿತಿ ಕಣಿಯೂರು ಘಟಕದ ಸ್ವಯಂ ಸೇವಕರಿಂದ ಬಂದಾರು ಗ್ರಾಮ ಮೈರೋಳ್ತಡ್ಕ-ಕುರಾಯ-ಪುತ್ತಿಲ ರಸ್ತೆಯ ಇಕ್ಕೆಲಗಳಲ್ಲಿ ಇರುವಂತಹ ಪೊದೆ,ಗಿಡ ಹುಲ್ಲು ತೆಗೆಯುವ ಮೂಲಕ ಸ್ವಚ್ಛತಾ ಸೇವಾ ಕಾರ್ಯವನ್ನು ನಡೆಸಲಾಯಿತು.

ರಸ್ತೆಯ ಎರಡು ಬದಿಗಳಲ್ಲಿ ಗಿಡಗಂಟಿಗಳು ಬೆಳೆದು ರಸ್ತೆ ಯಲ್ಲಿ ವಾಹನ ಸಂಚಾರಕ್ಕೆ ಹಾಗೂ ಪಾದಚಾರಿಗಳಿಗೆ ತೊಂದರೆ ಯಾಗುವುದನ್ನು ಮನಗಂಡು ಕಣಿಯೂರು ವಿಪತ್ತು ಘಟಕ ಪ್ರತಿನಿಧಿ ಗಿರೀಶ್ ಬಿ. ಕೆ ಕುಂಬುಡಂಗೆ, ದಿನೇಶ್ ಖಂಡಿಗ, ಪ್ರಶಾಂತ್ ನಿರುoಬುಡ, ರತನ್ ಮುಗೇರಡ್ಕ ಹಾಗೂ ನಾರಾಯಣ ಗೌಡ ಮುಂಡೂರು ಮೆಷಿನ್ ನೀಡಿ ಶ್ರಮದಾನದಲ್ಲಿ ಪಾಲ್ಗೊಂಡು ಎರಡು ಬದಿಯಲ್ಲಿ ಬೆಳೆದ ಕಳೆ ಗಿಡಗಳನ್ನು ತೆಗೆದು ಸ್ವಚ್ಛ ಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿರುತ್ತಾರೆ. ಇವರ ಈ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here