ರಾಜ ಕೇಸರಿ ಸಂಘಟನೆಯ 34ನೇ ಆಸರೆ ಮನೆಯ ಉದ್ಘಾಟನೆ

0

ಮೇಲಂತಬೆಟ್ಟು: ಮೇಲಂತಬೆಟ್ಟು ಗ್ರಾಮದ ಒಳ್ತುರೊಡಿ ನಿವಾಸಿಯಾದ ಶಾಂತ ಎಂಬವರಿಗೆ ರಾಜ ಕೇಸರಿ ಸಂಘಟನೆಯ 34ನೇ ಆಸರೆ ಮನೆ ನ ನಿರ್ಮಿಸಿ ಇದೀಗ  ವಾಸ್ತು ಪೂಜೆ ಮತ್ತು ಗೃಹಪ್ರವೇಶ ಕಾರ್ಯಕ್ರಮವು ಕಟ್ಟೆಮಾರ್  ಶ್ರೀಮಂತ್ರ ದೇವತೆ ಸಾನಿಧ್ಯದ  ಧರ್ಮದರ್ಶಿಗಳು  ಮನೋಜ್ ಕಟ್ಟೆ ಮಾರ್  ಇವರ ಶುಭ ಆಶೀರ್ವಾದದೊಂದಿಗೆ , ಶ್ರೀ ನಾಗಕಲ್ಲುಟ್ಟಿ ದೇವಸ್ಥಾನ ಶ್ರೀ ಕ್ಷೇತ್ರ ಮಂಗಳಗಿರಿ ಮುಂಡೂರು ಇದರ ಸಹ ಅರ್ಚಕರಾದ ಸುಧಾಕರ್ ಇವರ ನೇತೃತ್ವದಲ್ಲಿ ನ.13 ರಂದು ಜರುಗಿತು.

ಮನೆ ಉದ್ಘಾಟನೆಯನ್ನು ಬೆಳ್ತಂಗಡಿ ಪೊಲೀಸ್ ಠಾಣೆಯ ಸ್ಥಳೀಯ ಬೀಟ್ ಪೊಲೀಸ್ ಶ್ರೀಮತಿ ಸುನಿತಾ ಪ್ರವೀಣ್ ಇವರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ನಾಮಫಲಕವನ್ನು ವಿಜಯವಾಣಿ ಸಂತೆಕಟ್ಟೆ ಇವರ ನೆರವೇರಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರರಾಜ್ ಎಂ, ಮುಂಡೂರು ಗ್ರಾಮ್ ಪಂಚಾಯತ್ ಸದಸ್ಯರಾದ ಸಂತೋಷ್ ಕುಮಾರ್, ರಾಜ ಕೇಸರಿ ಸಂಘಟನೆ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ, ಸದಸ್ಯರುಗಳಾದ ಸಂದೀಪ್,  ಸಂತೋಷ್,  ಸಂಪತ್,  ಸಂದೇಶ್ , ಅಮೃತ್ , ಪ್ರಶಾಂತ್ ನಾಯಕ್ ಮತ್ತು ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here