ವೇಣೂರು:  10ನೇ ವರ್ಷದ ಧರ್ಮಸ್ಥಳ ಪಾದಯಾತ್ರೆಯ ಪೂರ್ವಭಾವಿ ಸಭೆ

0

ವೇಣೂರು: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಲಿರುವ ಲಕ್ಷ ದೀಪೋತ್ಸವದ ಪ್ರಯುಕ್ತ ನಡೆಯಲಿರುವ ಪಾದಯಾತ್ರೆಯ ಬಗ್ಗೆ ವೇಣೂರು ವಲಯ ಯೋಜನೆಯ ಪೂರ್ವಭಾವಿ ಸಭೆಯು ನ. 12ರಂದು ಇಲ್ಲಿಯ ವಲಯಕಚೇರಿಯಲ್ಲಿ ಜರಗಿತು.

ಜನಜಾಗೃತಿ ವೇದಿಕೆ ವಲಯಾಧ್ಯಕ್ಷ ಹರೀಶ್ ಕುಮಾರ್ ಪೊಕ್ಕಿ ಅಧ್ಯಕ್ಷತೆ ವಹಿಸಿದ್ದರು. ಯೋಜನಾಧಿಕಾರಿ ಯಶವಂತ್ ಎಸ್. ಪ್ರಾಸ್ತಾವಿಸಿದರು.

ವೇಣೂರು ಜೈನದಿಗಂಬರ ತೀರ್ಥಕ್ಷೇತ್ರ ಸಮಿತಿಯ ಮಾಜಿ ಕಾರ್ಯದರ್ಶಿ ಯಂ. ವಿಜಯರಾಜ ಅಧಿಕಾರಿ, ವರ್ತಕರ ಸಂಘದ ಅಧ್ಯಕ್ಷ ಕೆ. ಭಾಸ್ಕರ ಪೈ, ಪ್ರಮುಖರಾದ ಭರತ್‌ರಾಜ್ ಪಾಪುದಡ್ಕ, ಸುಂದರ ಹೆಗ್ಡೆ ಬಿ ಇ, ಎ. ಜಯರಾಮ್ ಶೆಟ್ಟಿ ಖಂಡಿಗ, ಸೀತಾರಾಮ ಆಚಾರ್ಯ, ರಮೇಶ್ ಪೂಜಾರಿ ಪಡ್ಡಾಯಿಮಜಲು, ಗಿರೀಶ್ ಕೆ.ಎಸ್., ಸೋಮನಾಥ ಕೆ.ವಿ., ದಯಾನಂದ ಭಂಡಾರಿ, ಒಕ್ಕೂಟದ ವಲಯಧ್ಯಕ್ಷ ವರದರಾಜ ಕುಲಾಲ್, ಒಕ್ಕೂಟದ ಪದಾಧಿಕಾರಿಗಳು, ಸೇವಾಪ್ರತಿನಿಧಿಗಳು, ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಹಾಗೂ ವಿವಿಧ ಭಜನ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ಸೇವಾಪ್ರತಿನಿಧಿ ಸುರೇಶ್ ಶೆಟ್ಟಿ ಸ್ವಾಗತಿಸಿ, ವಲಯ ಮೇಲ್ವಿಚಾರಕಿ ಶಾಲಿನಿ ನಿರೂಪಿಸಿದರು. ಸೇವಾಪ್ರತಿನಿಧಿ ಜಯಂತಿ ವಂದಿಸಿದರು.

LEAVE A REPLY

Please enter your comment!
Please enter your name here