ಸೇಕ್ರೆಡ್ ಹಾರ್ಟ್ ಕಾಲೇಜು, ಮಡಂತ್ಯಾರಿನ ಆಂತರಿಕ ಗುಣಮಟ್ಟ ಹಾಗೂ ಭರವಸಾ ಕೋಶ (IQAC) ಸಿಬ್ಬಂದಿ ಸದಸ್ಯರಿಗೆ ಪ್ರವೇಶ ಮತ್ತು ತರಬೇತಿ ಕಾರ್ಯಕ್ರಮ

0


ಮಡಂತ್ಯಾರು:  ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರಿನ ಆಂತರಿಕ ಗುಣಮಟ್ಟ ಹಾಗೂ ಭರವಸಾ ಕೋಶ (IQAC) ಸಿಬ್ಬಂದಿ ಸದಸ್ಯರಿಗೆ ಪ್ರವೇಶ ಮತ್ತು ತರಬೇತಿ ಕಾರ್ಯಕ್ರಮವು ನ.12 ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಡಾ.ಪದ್ಮನಾಭನ್, ನಿವೃತ್ತ ರಾಜ್ಯ ಶಾಸ್ತ್ರ ಸಹ ಪ್ರಾಧ್ಯಾಪಕರು , ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಬೋಧನೆಯು ಹೆಚ್ಚು ಸವಾಲಿನ ಮತ್ತು ಅತ್ಯಂತ ಉದಾತ್ತ ವೃತ್ತಿಯಾಗಿದೆ ಎಂದು ಅವರು ತಿಳಿಸಿದರು. ಬದಲಾಗುತ್ತಿರುವ ಈ ಜಾಗತೀಕರಣ ಸಂದರ್ಭ ದಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸವಾಲುಗಳನ್ನು ಮೆಟ್ಟಿ ನಿಲ್ಲುವ ಶಿಕ್ಷಕರ ಪಾತ್ರವು ಗುಣಮಟ್ಟದ್ದಾಗಿರುವುದರೊಂದಿಗೆ ಅಧ್ಯಾಪಕರು ಅಳವಡಿಸಿಕೊಳ್ಳುವ ಉಪಕ್ರಮಗಳು ಮತ್ತು ಜೀವನ ಕೌಶಲ್ಯಗಳನ್ನು ಅವಲಂಬಿಸಿರುತ್ತದೆ. ಯುವ ಮನಸ್ಸುಗಳನ್ನು ಪ್ರೀತಿ ಮತ್ತು ವಾತ್ಸಲ್ಯದಿಂದ ನಿಭಾಯಿಸಲು ಒತ್ತು ನೀಡಿದ ಅವರು, ಜ್ಞಾನ, ಕಲಿಯುವ ಮನೋಭಾವದ ಬಗ್ಗೆ ಶೈಕ್ಷಣಿಕ ಬೆಳವಣಿಗೆಯಲ್ಲಿ ಆಸಕ್ತಿಯನ್ನು ಕಳೆದುಕೊಳ್ಳದಂತೆ ಶಿಕ್ಷಕರಿಗೆ ಎಚ್ಚರಿಕೆ ನೀಡಿದರು.

LEAVE A REPLY

Please enter your comment!
Please enter your name here