ಕಳೆಂಜ ಗ್ರಾ.ಪಂ ಪ್ರಥಮ ಸುತ್ತಿನ ಗ್ರಾಮ ಸಭೆ

0

ಕಳೆಂಜ: ಕಳೆಂಜ ಗ್ರಾ.ಪಂ ನ 2022-23ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯು ನ.16 ರಂದು ದ.ಕ.ಜಿ.ಪ ಉನ್ನತೀಕರಿಸಿದ ಹಿ.ಪ್ರಾ ಶಾಲೆ ಶಾಲೆತ್ತಡ್ಕದಲ್ಲಿ ಜರುಗಿತು.

ಗ್ರಾಮ ಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿ ಚಿದಾನಂದ ಹೂಗಾರ್   ಕೃಷಿ ಅಧಿಕಾರಿ, ರೈತ ಸಂಪರ್ಕ ಕೊಕ್ಕಡ ಇವರ ಮಾರ್ಗದರ್ಶನದಲ್ಲಿ ಗ್ರಾಮ ಸಭೆ ಜರುಗಿತು.

ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದು , ವಿವಿಧ ಇಲಾಖೆಗಳಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಸರಕಾರದ ವಿವಿಧ ಯೋಜನೆಗಳ ಬಗ್ಗೆ ಅರ್ಜಿಗಳನ್ನು ಸ್ವೀಕರಿಸಲಾಯಿತು.

ನಂತರ  ವಿವಿಧ ಶೀರ್ಷಿಕೆಯಡಿ ಜಮಾ ಖರ್ಚಿನ ವಿವರವನ್ನು ಗುಮಾಸ್ತ ರಾಜೇಶ್ ನೀಡಿದರು. ಜನವಸತಿ ವಾರ್ಡ್ ಸಭೆಗಳಲ್ಲಿ ಬಂದ ಪ್ರಸ್ತಾವನೆಗಳ ಅನುಮೋದನೆ, ವಿವಿಧ ಇಲಾಖಾವಾರು ಮಾಹಿತಿ, ಗ್ರಾಮದ ಅಭಿವೃದ್ಧಿಯ ಬಗ್ಗೆ ಚರ್ಚೆ, ಸಾರ್ವಜನಿಕ ಅರ್ಜಿ ಸ್ವೀಕಾರ ಇತರ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರು ಪ್ರಸನ್ನ ಎ.ಪಿ, ಉಪಾಧ್ಯಕ್ಷೆ ಗಿರಿಜ, ಕಾರ್ಯದರ್ಶಿ ಹೊನ್ನಪ್ಪ ಗೌಡ ಎಂ ಹಾಗೂ ಸರ್ವಸದಸ್ಯರು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಗ್ರಾಮ ಸಭೆಯಲ್ಲಿ ಪಂ ಅಭಿವೃದ್ಧಿ ಅಧಿಕಾರಿ ಹೊನ್ನಮ್ಮ ಕೆ ಸ್ವಾಗತಿಸಿ ವರದಿ ಮಂಡಿಸಿದರು.

LEAVE A REPLY

Please enter your comment!
Please enter your name here