ನಿಡ್ಲೆ: ಡ್ರೋನ್ ಮತ್ತು ಮೊಬೈಲ್ ಕಮಾಂಡ್ ಆಂಡ್ ಕಂಟ್ರೋಲ್ ಸೆಂಟರ್ ಆವಿಷ್ಕಾರ: ಡಾ. ಹೆಗ್ಗಡೆಯವರಿಂದ ಅನಾವರಣ

0

ನಿಡ್ಲೆ:  ನಿಡ್ಲೆಯಲ್ಲಿ ಸ್ಥಾಪಿತವಾದ ಪ್ರಥಮ ಡ್ರೋನ್ ಮತ್ತು ರೋಬೋಟ್ ತಂತ್ರಜ್ಞಾನದ ಕಂಪನಿ ಅಂಗುಲೈರ್ ಇದೀಗ ಮತ್ತೊಂದು ಆವಿಷ್ಕಾರ ಮತ್ತು ಮೈಲಿಗಲ್ಲು ಸ್ಥಾಪಿಸಿದೆ.

ಅಂಗುಲೈರ್ ಎಂದು ಡಿಜೆ-ಬ್ರಾಂಡ್ ಆಗಿದ್ದು ಈ ಕಂಪನಿಯು ದೇಶದ ರಕ್ಷಣಾ ಪಡೆಗೆ ಐಎಸ್‌ಆರ್(ಉತ್ಕೃಷ್ಟ ಕಣ್ಗಾವಲು ) ಇರಿಸಲು ಕನೆಕ್ಟೆಡ್ ಡ್ರೋನ್ ಅನ್ನು ಹಸ್ತಾಂತರಿಸಿದೆ. ಈಗ ಅದರ ಬೆನ್ನಲ್ಲೇ ನಾಗರಿಕ ಕೆಟಗರಿನಲ್ಲಿ ಸರಿದೂಗುವ ಡ್ರೋನ್ ಮತ್ತು ಅದರ ಮೊಬೈಲ್ ಕಮಾಂಡ್ ಆಂಡ್ ಕಂಟ್ರೋಲ್ ಸೆಂಟರ್‌ನ್ನು ನ. 14 ರಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಅನಾವರಣಗೊಳಿಸಲಾಯಿತು.

ದೇಶದಲ್ಲೇ ಮೊದಲ ಬಾರಿಗೆ ಕನೆಕ್ಟೆಡ್ ಡ್ರೋನ್ ಮತ್ತು ಮೊಬೈಲ್ ಕಮಾಂಡ್ ಆಂಡ್ ಕಂಟ್ರೋಲ್ ಸೆಂಟರ್ ಸಂಯೋಜನೆ ಮಾಡಲಾಗಿದೆ ಎಂದು ಸಂಸ್ಥೆಯ ನಿರ್ದೇಶಕರು ಅತಿಶಯ್ ಜೈನ್ ವಿವರಿಸಿದರು.

ಇದೀಗ ಭಾರತೀಯ ರಕ್ಷಣಾ ಸಂಸ್ಥೆಯಲ್ಲಿ ಬಳಸಲಾಗಿದ್ದು, ಮುಂದಕ್ಕೆ ಟ್ರಾಫಿಕ್ ನಿಯಂತ್ರಣ, ದೊಡ್ಡ ಸಮಾವೇಶಗಳ, ವಿಐಪಿ ಚಲನವಲನ ಮೇಲೆ ಕಣ್ಗಾವಲು ಮತ್ತು ನಿಗಾ ಇರಿಸಲು, ತಾತ್ಕಾಲಿಕ ೪ಜಿ / ೫ಜಿ ಪರಿವರ್ತಕಗಳು, ೩೦ಎಕ್ಸ್ ಕ್ಯಾಮೆರಾ, ಐಆರ್ ಕ್ಯಾಮೆರಾ, ಥರ್ಮಲ್ ಕ್ಯಾಮೆರಾಗಳನ್ನು ಅಳವಡಿಸಲು ಸಾಮರ್ಥ್ಯ ಇರುತ್ತದೆ.

ಹೆಗ್ಗಡೆಯವರು ಮಾತನಾಡಿ ಆ ತಾಂತ್ರಿಕ ಆವಿಷ್ಕಾರವನ್ನು ಪೊಲೀಸ್, ಆಂತರಿಕ ಭದ್ರತೆ , ದೊಡ್ಡ ಮತ್ತು ಅತಿ ದೊಡ್ಡ ಸಮಾವೇಶಗಳು ನಡೆಯುವಲ್ಲಿ ಬಳಸಬಹುದೆಂದು ಅಭಿಪ್ರಾಯಪಟ್ಟರು
ಡಿ. ಹರ್ಷೇಂದ್ರ ಕುಮಾರ್ ಮಾತನಾಡಿ ಈ ಡ್ರೋನ್ ಮತ್ತು ಕಮಾಂಡ್ ಆಂಡ್ ಕಂಟ್ರೋಲ್ ಸೆಂಟರ್ ಸಂಯೋಜನೆ ಉತ್ತಮ ಆವಿಷ್ಕಾರ ಆಗಿದೆ ಎಂದು ಶ್ಲಾಸಿದರು. ಇದನ್ನು ಧರ್ಮಸ್ಥಳದಲ್ಲಿ ನಡೆಯುವ ದೊಡ್ಡ ಕಾರ್ಯಕ್ರಮಗಳಿಗೆ ಬಳಸುವ ಇಚ್ಛೆ ವ್ಯಕ್ತಪಡಿಸಿದರು.

ಸಂಸ್ಥೆಯ ಇನ್ನೋರ್ವ ನಿರ್ದೇಶಕ ಅವಿನಾಶ್ ರಾವ್ ಅವರು ಮತ್ತು ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here