ಬೆಳ್ತಂಗಡಿ: ಜೇಸಿ ಪ್ರಶಾಂತ ಲಾೖಲರವರಿಗೆ ಅತ್ಯುತ್ತಮ ವಲಯ ಉಪಾಧ್ಯಕ್ಷ ಪ್ರಶಸ್ತಿ

0

ಬೆಳ್ತಂಗಡಿ: ಜೆಸಿಐ ಭಾರತದ ಪ್ರತಿಷ್ಠಿತ ವಲಯ ಹದಿನೈದರ ಪ್ರತಿಷ್ಠಿತ ಘಟಕ ಜೆಸಿಐ ಬೆಳ್ತಂಗಡಿ ಇದರ ಪೂರ್ವಾಧ್ಯಕ್ಷ ಜೇಸಿ ಪ್ರಶಾಂತ ಲಾೖಲರವರಿಗೆ ವಲಯ ಹದಿನೈದರ ‘ಮೊಸ್ಟ್ ಔಟ್ ಸ್ಟಾಂಡಿಂಗ್ ಝೋನ್ ವೈಸ್ ಪ್ರೆಸಿಡೆಂಟ್, ಪ್ರಶಸ್ತಿಯನ್ನು ವಲಯಾಧ್ಯಕ್ಷರಾದ ಸೆನೆಟರ್ ರೊಯನ್ ಉದಯ ಕ್ರಾಸ್ತಾ ಮತ್ತು ವಲಯದ ಪ್ರಥಮ ಮಹಿಳೆ ಮರಿಯಾ ಜ್ಯೊತಿ ರೊಡ್ರಿಗಸ್ 2022 ರ ಕನಸುಗಳ ಹಬ್ಬ ಜೇಸಿ ವಲಯ ಸಮ್ಮೇಳನದಲ್ಲಿ ವಲಯದ ಪೂರ್ವಾಧ್ಯಕ್ಷರು, ಹಿರಿಯ ಜೇಸಿಗಳು ಮತ್ತು ವಲಯ ಹದಿನೈದರ ಎಲ್ಲಾ ಜೇಸಿ ಸದಸ್ಯರ ಸಮ್ಮುಖದಲ್ಲಿ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಪತ್ನಿ ಆಶಾಲತಾ ಪ್ರಶಾಂತ್ ಉಪಸ್ಥಿತರಿದ್ದರು.

ಈ ಸಮ್ಮೇಳನವು ಜೆಸಿಐ ಕಾರ್ಕಳ ರೂರಲ್ ಆತಿಥ್ಯದಲ್ಲಿ ನಿಟ್ಟೆಯ ಸನ್ಮಾನ್ ರೆಸಿಡೆನ್ಸಿ ಯಲ್ಲಿ ನವೆಂಬರ್ 5 ಮತ್ತು 6 ರಂದು ಜರುಗಿತು.

ಇವರು 2019 ರಲ್ಲಿ ಜೆಸಿಐ ಬೆಳ್ತಂಗಡಿ ಇದರ ಅಧ್ಯಕ್ಷರಾಗಿ ಯಶಸ್ವಿಯಾಗಿ ನಿರ್ವಹಿಸಿ 2022 ಸಾಲಿನ ವಲಯ ಉಪಾಧ್ಯಕ್ಷ ಚುನಾವಣೆಯಲ್ಲಿ ವಲಯ ಉಪಾಧ್ಯಕ್ಷರಾಗಿ ಚುನಾಯಿತರಾದವರು. ಪ್ರಸ್ತುತ ಸಾಲಿನಲ್ಲಿ ವಲಯ ಹದಿನೈದರ ಪ್ರಾಂತ್ಯ ‘ಬಿ’ ಗೆ ಹಾಗೂ ವಲಯಕ್ಕೆ ಉತ್ತಮ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here