ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಶಂಕರ್ ರಾವ್ ಮತ್ತು ಅನುದೀಪ್ ಜೈನ್ ಅವರಿಗೆ ಅವಳಿ ಪ್ರಶಸ್ತಿ

0

ಬೆಳ್ತಂಗಡಿ: ಜೆಸಿಐ ಭಾರತದ ವಲಯ 15ರ ವಲಯ ಸಮ್ಮೇಳನದಲ್ಲಿ ಬೆಳ್ತಂಗಡಿ ಮಂಜುಶ್ರೀಯ 2021-22ನೇ ಸಾಲಿನ ಯಶಸ್ವಿ ಕಾರ್ಯದರ್ಶಿ ಶಂಕರ್ ರಾವ್ ಅವರಿಗೆ ಅತ್ಯುತ್ತಮ ಘಟಕ ಅಧಿಕಾರಿ ಪ್ರಶಸ್ತಿ ಲಭಿಸಿದೆ. ಅಲ್ಲದೇ ಘಟಕದ ಸದಸ್ಯ ಅನುದೀಪ್ ಜೈನ್ ಅವರು ಅತ್ಯುತ್ತಮ ಹೊಸ ಜೆಸಿ ಸದಸ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವಲಯದ 85 ಘಟಕಗಳ ಪೈಕಿ ಈ ಪ್ರಶಸ್ತಿಗಳು ಜೆಸಿಐ ಬೆಳ್ತಂಗಡಿಯ ಸದಸ್ಯರಿಗೆ ಲಭಿಸರುವುದು ಜೆಸಿಐ ಬೆಳ್ತಂಗಡಿ ಮಂಜುಶ್ರೀಗೆ ಹೆಮ್ಮೆಯ ವಿಷಯಯಾಗಿದೆ.

ವಲಯಾಧ್ಯಕ್ಷ ರೋಯನ್ ಕ್ರಾಸ್ತ ವಲಯ ಸಮ್ಮೇಳನದಲ್ಲಿ ಪ್ರಶಸ್ತಿ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷರಾದ ಪ್ರಸಾದ್ ಬಿ.ಎಸ್, ವಲಯ ಉಪಾಧ್ಯಕ್ಷ ಪ್ರಶಾಂತ್ ಲಾಯಿಲ,ವಲಯಾಧಿಕಾರಿಗಳಾದ ಅಭಿನಂದನ್ ಹರೀಶ್ ಕುಮಾರ್,ಸ್ವರೂಪ್ ಶೇಖರ್,ಘಟಕದ ಪೂರ್ವಧ್ಯಕ್ಷ ಚಿದಾನಂದ ಇಡ್ಯ,,ಸದಸ್ಯರುಗಳಾದ ಶೀತಲ್ ಜೈನ್,ಪ್ರೀತಮ್ ಶೆಟ್ಟಿ, ಚಂದ್ರಹಾಸ್ ಬಳಂಜ,ಅರಿಹಂತ್ ಜೈನ್, ಸುದೀರ್ ಜೈನ್,ಆಶಾಲತಾ ಉಪಸ್ಥಿತರಿದ್ದು ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here