ಪುಂಜಾಲಕಟ್ಟೆ: ಪ್ರಥಮ ವರ್ಷದ ವಿದ್ಯಾರ್ಥಿಗಳ ಕೌಶಲ್ಯ ಹಾಗೂ ಪ್ರತಿಭೆಗಳನ್ನು ಪ್ರದರ್ಶಿಸುವ ಕಾರ್ಯಕ್ರಮ

0

ಪುಂಜಾಲಕಟ್ಟೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ವಾಣಿಜ್ಯ ವಿಭಾಗ ಮತ್ತು ವಾಣಿಜ್ಯ ಸಂಘದ ವತಿಯಿಂದ ಗ್ಯಾಲಾಕ್ಸಿ ಆಕ್ಟಿವೆಟೆಡ್ ಎಂಬ ಶೀರ್ಷಿಕೆಯೊಂದಿಗೆ ಪ್ರಥಮ ವರ್ಷದ ವಿದ್ಯಾರ್ಥಿಗಳ ಕೌಶಲ್ಯ ಹಾಗೂ ಪ್ರತಿಭೆಗಳನ್ನು ಪ್ರದರ್ಶಿಸಲು ನ.15 ರಂದು ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪಪ್ರಾಂಶುಪಾಲೆ   ಡಾ.ವೈಶಾಲಿ ವಹಿಸಿ ಅಧ್ಯಕ್ಷೀಯ ನುಡಿಗಳನ್ನಾಡಿದರು. ಎಚ್ ಒಡಿ ಆಫ್ ಕಾಮರ್ಸ್ ಡಾ.ಲೋಕೇಶ್,ವಾಣಿಜ್ಯ ವಿಭಾಗದ ಸಂಯೋಜಕರಾದ ಡಾ.ವಿಶಾಲ್ ಪಿಂಟೊ ಮತ್ತು ಪ್ರೊ.ದೀಕ್ಷಿತಾ ವೋರ್ಕಾಡಿ ಹಾಗೂ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಗೌರವಾನ್ವಿತ ಪ್ರಾಂಶುಪಾಲರಾದ ಡಾ.ಟಿ ಕೆ ಶರತ್ ಕುಮಾರ್ ಆಗಮಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನ್ನಾಡಿದರು.

ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ವಿವಿಧ ಚಟುವಟಿಕೆಗಳನ್ನು ನಡೆಸಲಾಯಿತು. ಉತ್ಪನ್ನ , ಮಾರಾಟ, ವ್ಯಾಪಾರ, ರಸಪ್ರಶ್ನೆ ಮತ್ತು ಐಸ್ ಬೇಕಿಂಗ್ ಚಟುವಟಿಕೆಗಳಲ್ಲ 8 ತಂಡಗಳಿದ್ದು, ಗೆದ್ದ ತಂಡಕ್ಕೆ ಬಹುಮಾನ ವಿತರಿಸಲಾಯಿತು. ಸುಮಾರು 195 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ತೃತೀಯ ಬಿಕಾಂ ವಿದ್ಯಾರ್ಥಿನಿ ಶುಭಾ ನಿರೂಪಿಸಿ, ರಾಜೇಶ್ವರಿ ಸ್ವಾಗತಿಸಿದರು, ವೀಣಾ ಧನ್ಯವಾದವಿತ್ತರು.

 

LEAVE A REPLY

Please enter your comment!
Please enter your name here