ನಡ ಸರಕಾರಿ ಪ್ರೌಢಶಾಲೆಯಲ್ಲಿ ಶಿಲ್ಪಕಲಾ ಕಾರ್ಯಾಗಾರ

0


ನಡ: ನಡ ಸರಕಾರಿ ಪ್ರೌಢಶಾಲೆಯಲ್ಲಿ ನ. 14 ರಂದು ಮಕ್ಕಳ ದಿನಾಚರಣೆ ಪ್ರಯುಕ್ತ “ಶಿಲ್ಪಕಲಾ ಕಾರ್ಯಾಗಾರ” ವನ್ನು ಆಯೋಜಿಸಲಾಗಿತ್ತು. ‘ಬಸವ ವಿಭೂಷಣ ಪ್ರಶಸ್ತಿ’ ವಿಜೇತ ಬೆಳಾಲಿನ ಶಿಲ್ಪಿ ಶಶಿಧರ ಆಚಾರ್ಯ ಹಾಗೂ ಸಂಗಡಿಗರು ಕಾರ್ಯಾಗಾರದಲ್ಲಿ ಭಾಗವಹಿಸಿ ವಿವಿಧ ಕಲಾಕೃತಿಗಳನ್ನು ಸೃಜಿಸಿ ತಮ್ಮ ಕಲಾ ಪ್ರೌಢಿಮೆಯನ್ನು ಮೆರೆದರು.

ತಂಡದಲ್ಲಿ ಶಿಲ್ಪಿ ಶಶಿಧರ ಆಚಾರ್ಯ ಇವರೊಂದಿಗೆ ಶಿಲ್ಪಿ ಪ್ರಕಾಶ ಆಚಾರ್ಯ, ಹಿರಿಯಡ್ಕ, ಶಿಲ್ಪಿ ಸತೀಶ್ ಯು ಆಚಾರ್ಯ, ಶಿಲ್ಪಿ ವಸಂತ ಆಚಾರ್ಯ, ಶಿಲ್ಪಿ ಶಶಿಧರ ಆಚಾರ್ಯ,ಶಿಲ್ಪಿ ಶಾಂತರಾಮ ಆಚಾರ್ಯ ಹಾಗೂ ಶಿಲ್ಪಿ ಹರೀಶ ಆಚಾರ್ಯ ಭಾಗವಹಿಸಿದ್ದರು.

ರಾಷ್ಟ್ರಮಟ್ಟದ ‘ ಬಸವ ವಿಭೂಷಣ ಪ್ರಶಸ್ತಿ’ ಪುರಷ್ಕೃತ ಶಿಲ್ಪಿ ಶಶಿಧರ ಆಚಾರ್ಯಯವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಭಾಗವಹಿಸಿದ ಶಿಲ್ಪಿಗಳಿಗೆ ಸ್ಮರಣಿಕೆ ಹಾಗೂ ಪ್ರಮಾಣಪತ್ರಗಳನ್ನು ನೀಡಿ ಗೌರವ ಸಲ್ಲಿಸಲಾಯಿತು.

ಮುಖ್ಯಶಿಕ್ಷಕ ಯಾಕೂಬ್ ಎಸ್. ಕೊಯ್ಯೂರು ಇವರು ಶಿಲ್ಪಿಗಳ ಕಲಾ ಚತುರತೆಯ ಬಗ್ಗೆ ಪ್ರಶಂಸೆಗೈದು ಶಿಲ್ಪಿಗಳಿಗೆ ಶುಭಕೋರಿದರು. ಶಿಕ್ಷಕ ಶಿವಪುತ್ರ ಸುಣಗಾರ ಮಾತಾಡಿ ಕಾರ್ಯಾಗಾರದ ಅನುಭವ ಹಂಚಿಕೊಂಡರು. ಶಾಲಾ ವಿದ್ಯಾರ್ಥಿ ರಕ್ಷಿತ್ ವೈ ಮತ್ತು ಅಭೀಕ್ಷಾ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಸುಜಯ ಬಿ. ಧನ್ಯವಾದಗೈದರು.

ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಹಕಾರದಿಂದ ಯಶಸ್ವಿಯಾಗಿ ನೆರವೇರಿದ ಈ ಕಾರ್ಯಾಗಾರದ ಸಮಾರೋಪ ಕಾರ್ಯಕ್ರಮವನ್ನು ಶಿಕ್ಷಕಿ ಶ್ರೀಮತಿ ಜಯಂತಿ ಜೆಸಿಂತಾ ಸ್ಟ್ರೆಲ್ಲಾ ನಿರೂಪಿಸಿದರು.

LEAVE A REPLY

Please enter your comment!
Please enter your name here