ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವರ ದಿಗ್ವಿಜಯ ಯಾತ್ರೆ ಮಾಯದಲ್ಲಿ ಸಮಾಲೋಚನಾ ಸಭೆ 

0

ಬೆಳಾಲು : ಶ್ರೀ ಮಾಯಾ ಮಹಾದೇವ ದೇವಸ್ಥಾನ ಮಹಾದೇವರ ಸನ್ನಿಧಿಯಲ್ಲಿರುವ ಲಿಂಗ ಸ್ವರೂಪಿ ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವರ ಮೂಲ ಸ್ಥಳ ಓಡಿಲ್ನಾಳ ಶ್ರೀ ಕ್ಷೇತ್ರ ಮೈರಲ್ಕೆಗೆ ಕಳುಹಿಸಿ ಕೊಡುವ “ದಿಗ್ವಿಜಯ ಯಾತ್ರೆ”ಯ ಬಗ್ಗೆ ಪೂರ್ವತಯಾರಿ ಸಮಾಲೋಚನಾ ಸಭೆ ಮಾಯಾ ಮಹಾದೇವ ದೇವಸ್ಥಾನದಲ್ಲಿ ನ.20 ರಂದು ನಡೆಯಿತು.

ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹೆಚ್. ಪದ್ಮ ಗೌಡ ಅಧ್ಯಕ್ಷತೆ ವಹಿಸಿದ್ದರು.ಸಭೆಯಲ್ಲಿ ಉಪಸ್ಥಿತರಿದ್ದ ಮೈರಲ್ಕೆ ಧರ್ಮೋತ್ತನ ಟ್ರಸ್ಟ್ ಅಧ್ಯಕ್ಷ ವೃಷಭ ಆರಿಗರು ಕಾರ್ಯಕ್ರಮದ ವಿವರ ನೀಡಿದರು ಡಿ.22 ದಿಗ್ವಿಜಯ ಯಾತ್ರೆ ಮೂಲಕ ದೇವರನ್ನು ಕೊಡು ಹೋಗಳಲಿದ್ದು ಪ್ರತಿ ಮನೆಯ ಭಕ್ತರು ನೈವೇದ್ಯಕ್ಕಾಗಿ ದೇಣಿಗೆ ಹಾಗು ಹೊರೆಕಾಣಿಕೆಯೊಂದಿಗೆ ಭಾಗವಹಿಸುವ ಕುರಿತು ತಿಳಿಸಲಾಯಿತು.

ಸಭೆಯಲ್ಲಿ ಮಾಯ ಗುತ್ತು ಪುಷ್ಪದಂತ ಜೈನ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶಿವಕುಮಾರ್ ಬಾರಿತ್ತಾಯ, ಗಂಗಯ್ಯ ಗೌಡ, ರಾಜಪ್ಪ ಗೌಡ, ನಾಣ್ಯಪ್ಪ ಪೂಜಾರಿ, ದಿನೇಶ್ ಎಂ. ಕೆ., ಸುಕನ್ಯಾ ಎನ್. ಸುವರ್ಣ, ಚಂದ್ರಾವತಿ, ಅರ್ಚಕ ಕೇಶವ ರಾಮಾಯಾಜಿ, ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿ ದಾಮೋದರ ಗೌಡ ಸುರುಳಿ ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ, ಸದಸ್ಯ ಜಯಂತ ಗೌಡ, ಮಾಯ ಮಹೇಶ್ವರ ಭಜನಾ ಮಂಡಳಿ ಅಧ್ಯಕ್ಷ ಕೃಷ್ಣಪ್ಪ ಗೌಡ ಮತ್ತು ಸದಸ್ಯರು, ಮಾಯ ಫ್ರೆಂಡ್ಸ್ ಅಧ್ಯಕ್ಷ ರಾಧಾಕೃಷ್ಣ, ಬೆಳಾಲು ಶ್ರೀ ಧ. ಮ. ಪ್ರೌಢ ಶಾಲಾ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್, ಸೇವಾ ಪ್ರತಿನಿಧಿ ಆಶಾ, ಪ್ರಭಾ, ಬೆಳಾಲು ಸಹಕಾರ ಸಂಘದ ನಿರ್ದೇಶಕ ವಿಜಯ ಗೌಡ ಸೌತೆಗದ್ದೆ, ಶ್ರೀ ಮಾಯ ಮಹೇಶ್ವರ ಭಜನಾ ಮಂಡಳಿ, ಶ್ರೀ ಕ್ಷೇತ್ರ ಧ, ಗ್ರಾ. ಯೋಜನೆ ರಿ, ಒಕ್ಕೂಟ ಮಾಯ, ಮಾಯ್ ಫ್ರೆಂಡ್ಸ್ ಮಾಯ, ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.

ನಿವೃತ್ತಕೃಷಿ ಅಧಿಕಾರಿ ನಾರಾಯಣ ಸುವರ್ಣ ಪ್ರಾಸ್ತವಿಕವಾಗಿ ಮಾತನಾಡಿದರು. ಶೇಖರ ಗೌಡ ಸ್ವಾಗತಿಸಿ ನಿರೂಪಿಸಿದರು.

LEAVE A REPLY

Please enter your comment!
Please enter your name here