ಮಕ್ಕಳ ಹಬ್ಬದಲ್ಲಿ ಬೆಳಾಲು ಪ್ರೌಢಶಾಲಾ ಮಕ್ಕಳ ಪಿಕ್ನಿಕ್

0

ಬೆಳಾಲು : ಕೇಶವ ಸ್ಮೃತಿ ಸಂವರ್ಧನ ಸಮಿತಿ ಮಂಗಳೂರು ಇವರ ವತಿಯಿಂದ, ಮಂಗಳೂರಿನ ಸಂಘ ನಿಕೇತನದಲ್ಲಿ ಜರಗಿದ ಎರಡು ದಿನಗಳ ಮಕ್ಕಳ ಹಬ್ಬದಲ್ಲಿ ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ಇಪ್ಪತ್ತಾರು ಮಕ್ಕಳು ಪಾಲ್ಗೊಂಡಿದ್ದರು.

ದ ಕ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಕನ್ನಡ ಶಾಲೆಗಳ ಸುಮಾರು ಹತ್ತು ಸಾವಿರ ವಿದ್ಯಾರ್ಥಿಗಳನ್ನು, ಐದೈದು ಸಾವಿರ ವಿದ್ಯಾರ್ಥಿಗಳ ಎರಡು ತಂಡಗಳಾಗಿ ವಿಭಾಗಿಸಿ ಪ್ರತೀ ತಂಡಕ್ಕೆ ಒಂದು ದಿನದ ಮಕ್ಕಳ ಹಬ್ಬವನ್ನು ಸಂಯೋಜಿಸಲಾಗಿತ್ತು.

ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ವೃದ್ಧಿ ಹಾಗೂ ವಿದ್ಯಾರ್ಥಿ ಸಮುದಾಯದಲ್ಲಿ ಭಾಷೆ , ಸಾಹಿತ್ಯ ಮತ್ತು ಸಂಸ್ಕೃತಿ ಕುರಿತ ಅರಿವನ್ನು ವಿಸ್ತರಿಸುವ ಉದ್ದೇಶದಿಂದ ಈ ಹಬ್ಬವನ್ನು ಆಯೋಜಿಸಲಾಗಿತ್ತು.

ಪ್ರೌಢಶಾಲೆಯ ಶಿಕ್ಷಕರಾದ ಶ್ರೀಮತಿ ರಾಜಶ್ರೀ ಮತ್ತು ಸುಮನ್ ಯು ಎಸ್ ರವರ ನೇತೃತ್ವದಲ್ಲಿ ಶಾಲಾ ಮಕ್ಕಳು ಮಕ್ಕಳ ಹಬ್ಬದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here