ಬೆಳಾಲು ಪ್ರೌಢಶಾಲೆಯಲ್ಲಿ ಮಗುವಿಗೊಂದು ಪುಸ್ತಕ ನೀಡಿ ಅಭಿಯಾನ

0

ಬೆಳಾಲು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ವತಿಯಿಂದ “ಮಗುವಿಗೊಂದು ಪುಸ್ತಕಗಳನ್ನು ನೀಡಿ” ಅಭಿಯಾನದ ಅಂಗವಾಗಿ ಮಕ್ಕಳಿಗೆ ಸಾಹಿತ್ಯಿಕ ಮಾಹಿತಿ ಮತ್ತು ಗ್ರಾಮ ಪಂಚಾಯತ್ ವಾಚನಾಲಯದ ಭೇಟಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶಯದಂತೆ ನಡೆಯುತ್ತಿರುವ ಈ ಚಟುವಟಿಕೆಯಲ್ಲಿ ಶಾಲೆಯ ಎಲ್ಲ ಮಕ್ಕಳನ್ನೂ ಪಂಚಾಯತ್ ವಾಚನಾಲಯದ ಸದಸ್ಯರನ್ನಾಗಿ ಮಾಡಲಾಯಿತು.

ಗ್ರಂಥಪಾಲಕರಾದ ಅರಣೆಮಾರು ಡೀಕಯ್ಯ ಗೌಡರವರು ಮಕ್ಕಳಿಗೆ ಸದಸ್ಯತನದ ಕುರುಹಾಗಿ ಪುಸ್ತಕವನ್ನು ನೀಡಿ ಆಂದೋಲಕ್ಕೆ ಚಾಲನೆ ನೀಡಿದರು. ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ಮತ್ತು ಶಾಲೆಯ ಗ್ರಂಥಪಾಲಕರಾದ ಶಿಕ್ಷಕಿ ಶ್ರೀಮತಿ ಚಿತ್ರಾರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here