ನಿಡ್ಲೆ: ವಣಸಾಯ ವನದುರ್ಗಾ ದೇವಿ, ಕೊಡಂಗೆ ಶ್ರೀ ಭಟಾರಿ ಯಾನೆ ಮಲೆದೇವತೆ ದೈವಸ್ಥಾನ ಮತ್ತು ಸಪರಿವಾರ ದೈವಗಳ ದೈವಸ್ಥಾನದ ಪ್ರತಿಷ್ಠಾ ಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ನಿಡ್ಲೆ: ವಣಸಾಯ ವನದುರ್ಗಾ ದೇವಿ ಹಾಗೂ ಕೊಡಂಗೆ ಶ್ರೀ ಭಟಾರಿ ಯಾನೆ ಮಲೆದೇವತೆ ದೈವಸ್ಥಾನ ಮತ್ತು ಕಲ್ಕುಡಗುಡ್ಡೆ ಶ್ರೀ ಕಲ್ಕುಡ ಕಲ್ಲುರ್ಟಿ, ಶ್ರೀ ಪಿಲಿಚಾಮುಂಡಿ ಸಪರಿವಾರ ದೈವಗಳ ದೈವಸ್ಥಾನದ ಪ್ರತಿಷ್ಠಾ ಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ  ಶಾಸಕ ಹರೀಶ್ ಪೂಂಜಾ ಇವರ ಸ್ವಗೃಹ ಮಿಥಿಲಾದಲ್ಲಿ ಶಾಸಕರ ಉಪಸ್ಥಿತಿಯಲ್ಲಿ ಮತ್ತು ದೈವಸ್ಥಾನದ ಆಡಳಿತ ವರ್ಗದ ಎಲ್ಲಾ ಸಮಿತಿಯ ಪದಾಧಿಕಾರಿಗಳ ಸಮ್ಮಖದಲ್ಲಿ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಪ್ರತಿಷ್ಠಾ ಕಲಶೋತ್ಸವ ಅಧ್ಯಕ್ಷರು  ಮಧುಕರ್ ರಾವ್ ಮಚ್ಚಳೆ, ಕಾರ್ಯದರ್ಶಿ ಬಾಲಕೃಷ್ಣ ಗೌಡ ಆಳಕೆ , ಜೀರ್ಣೋದ್ದಾರ ಸಮಿತಿ ಅಧ್ಯಕ್ಷರು ಜನಾರ್ಧನ ಗೌಡ ಕಜೆ, ಪ್ರಧಾನ ಕಾರ್ಯದಶಿ೯ ವಿಷ್ಣು ಮರಾಠೆ, ಆಡಳಿತ ಟ್ರಸ್ಟ್ ನ ಕಾರ್ಯದರ್ಶಿ  ಪ್ರವೀಣ್ ಹೆಬ್ಬಾರ್, ಮಹಿಳಾ ಸಮಿತಿ ಸಂಚಾಲಕಿ ವೇದಾವತಿ ಜನಾರ್ಧನ್ ಕಜೆ, ಪ್ರಚಾರ ಸಮಿತಿ ಸಂಚಾಲಕರು  ರುಕ್ಮಯ್ಯ ಪೂಜಾರಿ ಪೋರ್ಕಳ, ಶ್ರಮ ಸೇವಕರ ಸಂಚಾಲಕರು  ಸುಂದರ ಗೌಡ ಕಜೆ ಮತ್ತು ಸಮಿತಿ ಸದಸ್ಯರು ಹಾಜರಿದ್ದರು.

LEAVE A REPLY

Please enter your comment!
Please enter your name here