ಭಗವದ್ಗೀತೆ ಭಾಷಣ : ರಾಜ್ಯ ಮಟ್ಟದ ಸ್ಪರ್ಧೆಗೆ ಧರಿತ್ರಿ ಭಿಡೆ ಆಯ್ಕೆ

0

ಉಜಿರೆ : ಭಗವದ್ಗೀತಾ ಅಭಿಯಾನದ ಅಂಗವಾಗಿ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ , ಶಿರಸಿ ಇವರ ವತಿಯಿಂದ ಶ್ರೀ ದುರ್ಗಾಪರಮೇಶ್ವರಿ ಪದವಿಪೂರ್ವ ಕಾಲೇಜು, ಕಟೀಲು ಇಲ್ಲಿ “ಭಗವದ್ಗೀತೆ ಒಂದು ನಿರ್ವಹಣಾ ಶಾಸ್ತ್ರ ” ಎನ್ನುವ ವಿಷಯದ ಕುರಿತು ನಡೆದ ದ.ಕ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಸಂಸ್ಕೃತ ಭಾಷಾ ವಿದ್ಯಾರ್ಥಿನಿ ಧರಿತ್ರಿ ಭಿಡೆ ಪ್ರಥಮ ಬಹುಮಾನ ಪಡೆದು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ .

ಹಾಗೆಯೇ ದ್ವಿತೀಯ ವಾಣಿಜ್ಯಶಾಸ್ತ್ರದ ಸಿಂಚನಾ ಪಾಳಂದೆ ತೃತೀಯ ಬಹುಮಾನ ಪಡೆದಿದ್ದಾಳೆ. ಗೀತಾ ಕಂಠಪಾಠ ಸ್ಪರ್ಧೆಯಲ್ಲಿ ಪ್ರಥಮ ವಾಣಿಜ್ಯಶಾಸ್ತ್ರದ ವಂದಿತಾ ಎಸ್ ರಾವ್ ತೃತೀಯ ಬಹುಮಾನ ಪಡೆದಿದ್ದಾರೆ .

LEAVE A REPLY

Please enter your comment!
Please enter your name here