ನ.27:ತೋಟತ್ತಾಡಿ ಚರ್ಚ್ ನಲ್ಲಿ ಚೇರುಪುಷ್ಪ ಮೆಷಿನ್ ಸಂಸ್ಥೆಯ ವಜ್ರ ಮಹೋತ್ಸವ

0


ಬೆಳ್ತಂಗಡಿ : ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಪ್ರಾರಂಭಿಸಿದ ಚೇರುಪುಷ್ಪ ಮೆಷಿನ್ ಸಂಸ್ಥೆ ಇದರ ವಜ್ರ ಮಹೋತ್ಸವ ಕಾರ್ಯಕ್ರಮ ನ.27 ರಂದು ತೋಟತ್ತಾಡಿ ಸಂತ ಅಂತೋನಿ ಚರ್ಚ್ ನಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಪ್ರಚಾರ ಸಮಿತಿಯ ಸಂಚಾಲಕರು ಶಾಜಿ ಮ್ಯಾಥ್ಯ ಹೇಳಿದರು. ಅವರು ನ.22 ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ 3 ಪ್ರಾಂತ್ಯದ ಧರ್ಮಾಧ್ಯಕ್ಷರು, ವಿವಿಧ ಗಣ್ಯರು ಭಾಗವಹಿಸಲಿದ್ದಾರೆ,ಮಕ್ಕಳಲ್ಲಿ ಧರ್ಮ ಪ್ರಜ್ಞೆ, ರಾಷ್ಟ್ರ ಪ್ರಜ್ಞೆ ಮೂಡಿಸುವ ಉದ್ದೇಶದಿಂದ ಪ್ರಾರಂಭಮಾಡಿದ ಈ ಸಂಘಟನೆ ಮಕ್ಕಳ ಅಭಿವೃದ್ಧಿಗೆ ಹಲವಾರು ಕಾರ್ಯ ಹಮ್ಮಿಕೊಳ್ಳಲಾಗಿದೆ. ಸಮಾರಂಭದಲ್ಲಿ ಸಾಧನೆ ಗೈದ ಸಿಯೋನ್ ಆಶ್ರಯದ ಯು. ಸಿ. ಪೌಲೂಸ್,ಸನ್ನಿ ವರ್ಕಿ ಒಝಪಲ್ಲಿ, ಕುಮಾರಿ ರೋಸಾ ಜೋಯಿ, ತೇಜ ಇವರನ್ನು ಸನ್ಮಾನ ಮಾಡಲಾಗುವುದು.ಹಾಗೂ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಮಾಜಿ ಸೈನಿಕ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಅಧ್ಯಕ್ಷ ಜಾನ್ ಕೆ. ಟಿ.,ಸಂಪರ್ಕ ಅಧಿಕಾರಿ ಸೇಬಾಸ್ಟಿನ್ ಫುಲ್ಲು ಕಾಟ್ಟ್,  ಕಚೇರಿ ಸಿಬ್ಬಂದಿ ವರ್ಗಿಸ್ ಕೆ. ಡಿ. ಉಪಸ್ಥಿತರಿದ್ದರು.

 

 

 

LEAVE A REPLY

Please enter your comment!
Please enter your name here