ಪ್ರಸನ್ನ ರೆಸಿಡೆನ್ಸಿಯಲ್ ಸ್ಕೂಲ್ ಲಾಯಿಲದಲ್ಲಿ ವಾರ್ಷಿಕ ಕ್ರೀಡೋತ್ಸವ

0

ಲಾಯಿಲ: ಪ್ರಸನ್ನ ರೆಸಿಡೆನ್ಸಿಯಲ್ ಸ್ಕೂಲ್ ಲಾಯಿಲ ಇಲ್ಲಿಯ ವಾರ್ಷಿಕ ಕ್ರೀಡಾ ದಿನಾಚರಣೆಯು ಪ್ರಸನ್ನ ಸಿ.ಬಿ.ಎಸ್.ಇ ಆಟದ ಮೈದಾನದಲ್ಲಿ ನ.22ರಂದು ಜರುಗಿತು.

ಪ್ರಸನ್ನ ಶಿಕ್ಷಣ ಸಂಸ್ಥೆಗಳ ಛೇಯರ್ ಮ್ಯಾನ್ , ಮಾಜಿ ಸಚಿವರಾದ  ಕೆ ಗಂಗಾಧರ ಗೌಡ ಕ್ರೀಡಾಕೂಟವನ್ನು ಉದ್ಘಾಟಿಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಕ್ರೀಡೆಯಲ್ಲಿ ಭಾಗವಹಿಸಬೇಕು. ಕ್ರೀಡಾ ಮನೋಭಾವನೆಯನ್ನು ಪ್ರತೀಯೋಬ್ಬ ವಿದ್ಯಾರ್ಥಿಯೂ ಬೆಳೆಸಿಕೊಂಡು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಹಿತವಚನ ನೀಡಿದರು.

ಅತಿಥಿ ಅಭ್ಯಾಗತರನ್ನು ಸಂಸ್ಥೆಯ ಪ್ರಾಂಶುಪಾಲರಾದ ಕೆ.ಎಸ್ ಎನ್ ಭಟ್ ರವರು ಹೂಗುಚ್ಛಗಳನ್ನು ನೀಡುವ ಮೂಲಕ ಸ್ವಾಗತಿಸಿದರು. ಸಂಸ್ಥೆಯ ಆಡಳತಾಧಿಕಾರಿಗಳಾದ ಕಿರಣ್ ಹೆಬ್ಬಾರ್, ಸಾರ್ವಜನಿಕ ಸಂಪರ್ಕಾಧಿಕಾರಿ ಹೇಮಮತ್ ಕುಮಾರ್ ಮತ್ತು ಪಿಟಿಎ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮಕ್ಕಳಿಗೆ ಹಲವಾರು ಕ್ರೀಡಾವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಿತು. ವಿಜಯಿಗಳಾದವರನ್ನು ವಿಜಯವೇದಿಕೆಯಲ್ಲಿ ಗಣ್ಯರಿಂದ ಸನ್ಮಾನಿಸಲಾಯಿತು. ಶಿಕ್ಷಕ ಜಾನ್ ಮತ್ತು ಭಾರತಿ ಯನ್ ಕಾರ್ಯಕ್ರಮ ನಿರೂಪಿಸಿದರು. ಭಾರತೀಯವರು ವಂದನಾರ್ಪಣೆ ಗೈದರು.

LEAVE A REPLY

Please enter your comment!
Please enter your name here