ಅನುಗ್ರಹ ಶಾಲಾ ವಾರ್ಷಿಕ ಕ್ರೀಡಾಕೂಟ

0


ಉಜಿರೆ:  ಅನುಗ್ರಹ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟವು ಶಾಲಾ ಸಂಚಾಲಕರಾದ ವಂ| ಫಾ|ಜೇಮ್ಸ್ ಡಿ’ಸೋಜ ರವರ ಅಧ್ಯಕ್ಷತೆಯಲ್ಲಿ ಜರುಗಿತು.

ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಇದರ ಅಧ್ಯಕ್ಷರಾದ  ರಕ್ಷಿತ್ ಶಿವರಾಮ್ ರವರು ಕ್ರೀಡಾ ಧ್ವಜಾರೋಹಣವನ್ನು ನೆರವೇರಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು ಹಾಗೂ ಮಕ್ಕಳಿಂದ ನಡೆದ ಆಕರ್ಷಣೇಯ ಪಥ ಸಂಚಲನದಲ್ಲಿ ಗೌರವ ರಕ್ಷೆಯನ್ನು ಸ್ವೀಕರಿಸಿದರು.

ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಬಹುಮಾನ ನೀಡಲಾಯಿತು. ಫುಟ್ ಬಾಲ್‌ನಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ “ರೋಸಾ ಜೋಯ್” ಳನ್ನು ಸನ್ಮಾನಿಸಲಾಯಿತು. ಪಥ ಸಂಚಲನದಲ್ಲಿ ಉತ್ತಮ ಸಾಧನೆ ಮಾಡಿದ ತಂಡಗಳನ್ನು ಅಭಿನಂದಿಸಲಾಯಿತು.

ಶಾಲಾ ಬ್ಯಾಂಡ್ ತಂಡದಿಂದ ಕವಾಯತು ಹಾಗೂ ವಿದ್ಯಾರ್ಥಿನಿ ಯವರಿಂದ ಮಾಸ್ ಡ್ರಿಲ್ ನಡೆಯಿತು. ವೇದಿಕೆಯಲ್ಲಿ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷರಾದ  ಆಂಟನಿ ಫೆರ್ನಾಂಡೀಸ್, ಪಾಲಕ ಪೋಷಕ ಸಂಘದ ಉಪಾಧ್ಯಕ್ಷ ಆನಂದಕೃಷ್ಣ ಹಾಗೂ ಸದಸ್ಯರು, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ಸಂಸ್ಥೆಯ ಪ್ರಾಂಶುಪಾಲರಾದ ವಂ| ಫಾ| ವಿಜಯ್ ಲೋಬೋ ರವರು ಸ್ವಾಗತ ಭಾಷಣ ಮಾಡಿದರು. ಲಿಬಿಯವರು ಧನ್ಯವಾದವಿತ್ತರು.  ಪ್ರಭಾಕರ ಶೆಟ್ಟಿಯವರು ಕಾರ್ಯಕ್ರಮ ನಿರೂಪಿಸಿದರು. ತದನಂತರ ಮಕ್ಕಳ ಕ್ರೀಡಾ ಸ್ಪರ್ಧೆಗಳು ನೇರವೇರಲ್ಪಟ್ಟು ಅಪರಾಹ್ನ 4 ಗಂಟೆಗೆ ಸಮಾರೋಪ ಸಮಾರಂಭ ನಡೆದು ಕ್ರೀಡಾಕೂಟವು ಮುಕ್ತಾಯಗೊಂಡಿತು.

 

LEAVE A REPLY

Please enter your comment!
Please enter your name here