ವಾಯು ಮಾಲಿನ್ಯ ಮಾಸಚರಣೆ ಕಾರ್ಯಕ್ರಮ

0


ಬೆಳ್ತಂಗಡಿ : ಕರ್ನಾಟಕ ಸರ್ಕಾರ , ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ ಬಂಟ್ವಾಳ ಇದರ ಆಶ್ರಯದಲ್ಲಿ ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ  ಕಾರ್ಯಕ್ರಮವು ಹಿರಿಯ ವಾಹನ ನಿರೀಕ್ಷಕ ಚರಣ್ ಕೆ ಇವರ ಅಧ್ಯಕ್ಷ ತೆಯಲ್ಲಿ ನ.23 ರಂದು ಬೆಳ್ತಂಗಡಿ ಎ ಪಿ ಎಂ ಸಿ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಚರಣ್ ಕೆ ಮಾತನಾಡುತ್ತಾ ನಮ್ಮ ಮನೆಯನ್ನು ನಾವು ಸ್ವಚ್ಛವಾಗಿಡುವ ನಾವು ನಮ್ಮ ಪರಿಸರವನ್ನು ಸ್ವಚ್ಚವಾಗಿಡುವುದು ನಮ್ಮ ಕರ್ತವ್ಯ. ಸರ್ಕಾರ ಜನರಿಗಾಗಿ ಮಾಹಿತಿ, ಜಾಗೃತಿ ಮತ್ತು ಸೇವೆಯನ್ನು ನಿರಂತರವಾಗಿ ನೀಡುತ್ತಾ ಬಂದಿದೆ. ಅತಿಯಾದ ವಾಯು ಮಾಲಿನ್ಯವನ್ನು ತಡೆಗಟ್ಟಲು ಪರ್ಯಾಯ ಇಂಧನ ಬಳಸಿ ನಮ್ಮಿಂದಾದ ಕೊಡುಗೆಯನ್ನು ಕೊಡಬೇಕು ಎಂದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ವಾಣಿ ಪಿ. ಯು. ಕಾಲೇಜಿನ ಉಪ ಪ್ರಾಂಶುಪಾಲ ವಿಷ್ಣು ಪ್ರಕಾಶ್ ಮಾತನಾಡುತ್ತ ಇತ್ತೀಚೆಗೆ ವಾಯು ಮಾಲಿನ್ಯದಿಂದಾಗಿ ಜಾಗತಿಕ ತಾಪಮಾನದ ಮಟ್ಟ ಏರಿಕೆಯಾಗುತ್ತಿದ್ದು ಪರಿಸರ ಮತ್ತು ಮನುಷ್ಯರ ಮೇಲಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ತಿಳಿಸುತ್ತ ಈ ಪರಿಸರವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸುವ ಅಗತ್ಯತೆ ಇದೆ ಎಂದರು.

ಸಂಚಾರಿ ವಾಹನ ನಿರೀಕ್ಷರಾದ ಓಡಿಯಪ್ಪ ಗೌಡ ವಾಹನ ಮಾಲಕರು ಮತ್ತು ಚಾಲಕರುಗಳು ಅನುಸರಿಸಬೇಕಾದ ನಿಯಮಗಳು ಮತ್ತು ವಾಹನದಲ್ಲಿರಬೇಕಾದ ದಾಖಲೆಗಳ ಅಗತ್ಯ ಮತ್ತು ಮಹತ್ವದ ಬಗ್ಗೆ ತಿಳಿಸಿದರು. ಎ ಪಿ ಎಂ ಸಿ ಕಾರ್ಯದರ್ಶಿ ಎಸ್ ರವೀಂದ್ರ , ಚಾಮುಂಡೇಶ್ವರಿ ಎಲೆಕ್ಟ್ರಿಕ್ ವಾಹನ ಶೋರೂಂ ನ ಮಾಲಕರಾದ ಸುಧೀರ್ ಹೊಳ್ಳ ಕಾರ್ಯಕ್ರಮ ಕ್ಕೆ ಶುಭಹಾರ್ಸಿದರು.ಪ್ರಾರಂಭದಲ್ಲಿ ರಾಮದಾಸ ಭಂಡಾರ್ಕರ್ ಎಲ್ಲರನ್ನು ಸ್ವಾಗತಿಸಿ ವಿನ್ಸೆಂಟ್ ಧನ್ಯವಾದ ನೀಡಿದರು. ಸುಧಾ ರಮಾನಂದ್ ಕಾರ್ಯಕ್ರಮ ನಿರೂಪಿಸಿದರು .

LEAVE A REPLY

Please enter your comment!
Please enter your name here