HomePage_Banner
HomePage_Banner
HomePage_Banner

34 ನೆಕ್ಕಿಲಾಡಿಯಲ್ಲಿ ಮಳೆಗಾಲ ಪೂರ್ವ ಕಾಮಗಾರಿಗೆ ಮೀನಾ-ಮೇಷ, ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ `ಫೋನ್ ಕಾಲ್ ಅಭಿಯಾನ’

Puttur_Advt_NewsUnder_1
Puttur_Advt_NewsUnder_1
                      34ನೇ ನೆಕ್ಕಿಲಾಡಿ ಗ್ರಾ.ಪಂ. ಸದಸ್ಯೆಯಾಗಿ ಆಯ್ಕೆಯಾದ ಅನಿ ಮಿನೇಜಸ್ ರವರಿಗೆ ಸನ್ಮಾನ

ಉಪ್ಪಿನಂಗಡಿ: ಮಳೆಗಾಲಕ್ಕೆ ಮುಂಚಿತವಾಗಿ ಆಗಬೇಕಾದ ಚರಂಡಿ ದುರಸ್ತಿ ಹಾಗೂ ದಾರಿ ದೀಪಗಳ ಅಳವಡಿಕೆ ಕಾಮಗಾರಿ ನಡೆಸಲು ೩೪ ನೆಕ್ಕಿಲಾಡಿ ಗ್ರಾ.ಪಂ. ಮೀನಾ- ಮೇಷ ಎಣಿಸುತ್ತಿದೆ. ಆದ್ದರಿಂದ ಗ್ರಾಮಸ್ಥರು ಸಮಸ್ಯೆಗೆ ಸಿಲುಕುವಂತಾಗಿದೆ. ಆದ್ದರಿಂದ ಈ ಕಾಮಗಾರಿಯನ್ನು ಪಂಚಾಯತ್‌ನವರು ಆರಂಭಿಸುವ ತನಕ ನಮ್ಮೂರು- ನೆಕ್ಕಿಲಾಡಿಯು ಗ್ರಾಮಸ್ಥರ ಸಹಕಾರದೊಂದಿಗೆ ಪ್ರತಿಭಟನೆ ಹಾಗೂ ತಾ.ಪಂ. ಇಒ, ಸಿಇಒ ಹಾಗೂ ಪಂಚಾಯತ್‌ರಾಜ್ ಇಲಾಖೆಯ ಆಯುಕ್ತರ ಮೊಬೈಲ್‌ಗಳಿಗೆ ನಿರಂತರವಾಗಿ ಕರೆ ಮಾಡಿ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಒತ್ತಾಯಿಸುವ ಮೂಲಕ `ಫೋನ್ ಕಾಲ್ ಅಭಿಯಾನ’ ನಡೆಸಲಾಗುವುದು ಎಂಬ ನಿರ್ಧಾರವನ್ನು ನಮ್ಮೂರು- ನೆಕ್ಕಿಲಾಡಿ ಸಂಘಟನೆಯು ತೆಗೆದುಕೊಂಡಿದೆ.

34ನೇ ನೆಕ್ಕಿಲಾಡಿಯ ಯುನಿಕ್ ಕೌಂಪಾಂಡ್‌ನಲ್ಲಿ ಶನಿವಾರ ನಡೆದ ಸಂಘಟನೆಯ ಸಭೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ 34ನೇ ನೆಕ್ಕಿಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಲ್ಲಿ ಹಿನ್ನಡೆಯಾಗುತ್ತಿರುವುದು ಚರ್ಚೆಯಾಗಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ನಮ್ಮೂರು- ನೆಕ್ಕಿಲಾಡಿ ಅಧ್ಯಕ್ಷ ಅಬ್ದುರ್ರಹ್ಮಾನ್ ಯುನಿಕ್, ಮಳೆಗಾಲಕ್ಕೆ ಪೂರ್ವಭಾವಿಯಾಗಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಆಗಬೇಕಿದ್ದ ಚರಂಡಿ ಕಾಮಗಾರಿ ಮಳೆಗಾಲ ಆರಂಭವಾದರೂ ಇನ್ನೂ ಆಗಿಲ್ಲ. ಹಲವು ಕಡೆ ಚರಂಡಿ ಗಿಡ,ಗಂಟಿಗಳಿಂದ ಆವರಿಸಿಕೊಂಡು ಹೂಳು ತುಂಬಿದೆ. ಇನ್ನು ಕೆಲವು ಕಡೆ ಚರಂಡಿಯೇ ಇಲ್ಲ. ಹಾಗಾರಿ ರಸ್ತೆಯಲ್ಲೇ ನೀರು ಹರಿದು ಹೋಗಬೇಕಾದ ಸ್ಥಿತಿಯಿದೆ. ಅಲ್ಲಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿದೆ. ಇನ್ನು ಗ್ರಾ.ಪಂ. ವ್ಯಾಪ್ತಿಯಲ್ಲಿ ದಾರಿ ದೀಪದ ವ್ಯವಸ್ಥೆ ಸಮರ್ಪಕವಾಗಿಲ್ಲ. ಹೆಚ್ಚಿನ ದಾರಿ ದೀಪಗಳು ಉರಿಯುತ್ತಿಲ್ಲ. ಈ ಬಗ್ಗೆ ಗ್ರಾ.ಪಂ. ಸದಸ್ಯರಲ್ಲಿ ಹೇಳಿದಾಗ ಕ್ರಿಯಾಯೋಜನೆಯ ಬಳಿಕ ಇದರ ಕಾಮಗಾರಿ ನಡೆಸುವುದು ಎಂಬ ಉತ್ತರ ಅಧಿಕಾರಿಗಳಿಂದ ಬರುತ್ತಿದೆ. ಮೂರ್‍ನಾಲ್ಕು ದಿನಗಳೊಳಗೆ ಕ್ರಿಯಾಯೋಜನೆಗೆ ಸಭೆ ಕರೆಯುವುದೆಂದು ಕಳೆದ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿದೆ. ಆದರೆ ಕ್ರಿಯಾ ಯೋಜನೆ ಸಿದ್ಧಪಡಿಸಲು ಸಭೆಯನ್ನು ಇನ್ನೂ ಕರೆದಿಲ್ಲ. ಅಧಿಕಾರಿಗಳಲ್ಲಿ ಈ ಬಗ್ಗೆ ಕೇಳಿದರೆ ಇಲ್ಲಸಲ್ಲದ ಕಾರಣ ಹೇಳಿ ನುಣುಚಿಕೊಳ್ಳುತ್ತಾರೆ ಎಂದು ಉತ್ತರಿಸುತ್ತಿದ್ದಾರೆ. ಕ್ರಿಯಾ ಯೋಜನೆಯಲ್ಲಿ ಕಾಮಗಾರಿ ಪಟ್ಟಿ ಸಿದ್ಧಗೊಂಡು ಬಳಿಕ ಅದಕ್ಕೆ ಸರಕಾರದಿಂದ ಅನುಮೋದನೆ ಸಿಗಬೇಕಾದರೆ ಕನಿಷ್ಟವಾದರೂ ಒಂದೆರಡು ತಿಂಗಳಾದರೂ ಬೇಕು. ಮಳೆಗಾಲದ ಅವಧಿಯಲ್ಲಿ ಅಗತ್ಯವಾಗಿ ಬೇಕಾದ ಕಾಮಗಾರಿ ಮಳೆಗಾಲ ಮುಗಿದ ಮೇಲೆ ನಡೆದು ಏನಾದರೂ ಪ್ರಯೋಜನವಿದೆಯೇ? ಮಳೆಗಾಲ ಎನ್ನುವುದು ಅನಿರೀಕ್ಷಿತವಲ್ಲ. ಅದು ಪೂರ್ವ ನಿರ್ಧರಿತ. ಆದ್ದರಿಂದ ವಾರ್ಷಿಕ ಕ್ರಿಯಾಯೋಜನೆಯಲ್ಲೇ ಇದರ ಕಾಮಗಾರಿ ಪಟ್ಟಿ ಸಿದ್ಧಗೊಳಿಸಬೇಕು. ಗ್ರಾ.ಪಂ.ನ ಆಡಳಿತಾತ್ಮಕದ ಪ್ರತಿಯೊಂದು ಜವಾಬ್ದಾರಿಯೂ ಅಧಿಕಾರಿಗಳಿಗಿದ್ದು, ಸದಸ್ಯರಿಗೆ ಈ ಬಗ್ಗೆ ಮಾಹಿತಿ ಇಲ್ಲದಿದ್ದಲ್ಲಿ ಅವರಿಗೆ ಹೇಳಿ, ಶೀಘ್ರವಾಗಿ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಬೇಕು. ೩೪ನೇ ನೆಕ್ಕಿಲಾಡಿ ನೆರೆ ಬಾಧಿತ ಪ್ರದೇಶವಾಗಿದ್ದು, ಇಲ್ಲಿ ಅಧಿಕಾರಿಗಳೂ ಈ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ. ಕೆಲವು ಸದಸ್ಯರನ್ನು ಬಿಟ್ಟರೆ ಇನ್ನುಳಿದ ಸದಸ್ಯರು ಗ್ರಾಮಸ್ಥರ ಸಮಸ್ಯೆಗಳಿಗೆ ಕಿವಿಗೊಡುತ್ತಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡುತ್ತಿಲ್ಲ. ಇದರಿಂದ ಗ್ರಾಮಸ್ಥರು ಸಂಕಷ್ಟಕ್ಕೆ ಈಡಾಗಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದರು.

೩೪ನೇ ನೆಕ್ಕಿಲಾಡಿ ಗ್ರಾ.ಪಂ.ನಲ್ಲಿ ಅಗತ್ಯ ಕಾಮಗಾರಿಗಳಾದ ಚರಂಡಿ ಹಾಗೂ ದಾರಿದೀಪ ವ್ಯವಸ್ಥೆಯನ್ನು ಶೀಘ್ರವಾಗಿ ನಡೆಸುವಂತೆ ಆಗ್ರಹಿಸಿ ನಮ್ಮೂರು- ನೆಕ್ಕಿಲಾಡಿ ಸಂಘಟನೆಯ ವತಿಯಿಂದ ಗ್ರಾಮಸ್ಥರನ್ನು ಕ್ರೂಢೀಕರಿಸಿಕೊಂಡು ಮೊದಲಿಗೆ ಗ್ರಾ.ಪಂ., ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಮನವಿ ನೀಡುವುದು. ಅದರಲ್ಲಿ ನೀಡಿದ ಗಡುವಿನೊಳಗೆ ಕಾಮಗಾರಿ ಆರಂಭವಾಗದಿದ್ದರೆ ಗ್ರಾ.ಪಂ. ಮುಂದೆ ಪ್ರತಿಭಟನೆ ನಡೆಸಿ ಕಾಮಗಾರಿ ಆರಂಭಿಸಲು ಗಡುವು ನೀಡಲಾಗುವುದು. ಬಳಿಕವೂ ಕಾಮಗಾರಿ ಆರಂಭಿಸದಿದ್ದಲ್ಲಿ ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಆಯುಕ್ತರ ಮೊಬೈಲ್ ನಂಬರ್‌ಗಳಿಗೆ ಗ್ರಾಮಸ್ಥರೆಲ್ಲಾ ನಿರಂತರ ಕರೆ ಮಾಡಿ ೩೪ನೇ ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಚರಂಡಿ ಹಾಗೂ ದಾರಿ ದೀಪದ ಕಾಮಗಾರಿ ನಡೆಸುವಂತೆ ಒತ್ತಾಯಿಸಲಾಗುವುದು. ಇದು ಕಾಮಗಾರಿ ಆರಂಭಿಸುವಲ್ಲಿಯವರೆಗೆ ಮುಂದುವರಿಯಲಿದೆ ಎಂದು ಎಚ್ಚರಿಸಿದರು.

34ನೇ ನೆಕ್ಕಿಲಾಡಿ ಗ್ರಾ.ಪಂ. ಉಪಚುನಾವಣೆಯಲ್ಲಿ ಚುನಾಯಿತರಾಗಿ ಗ್ರಾ.ಪಂ. ಸದಸ್ಯೆಯಾಗಿ ಆಯ್ಕೆಯಾದ ನಮ್ಮೂರು – ನೆಕ್ಕಿಲಾಡಿ ಪ್ರಧಾನ ಕಾರ್ಯದರ್ಶಿ ಅನಿ ಮಿನೇಜಸ್ ಅವರನ್ನು ಈ ಸಂದರ್ಭ ಸನ್ಮಾನಿಸಿ, ಗೌರವಿಸಲಾಯಿತು.  ಸಭೆಯಲ್ಲಿ ಕೋಶಾಧಿಕಾರಿ ಶಿವಕುಮಾರ್ ಬಾರಿತ್ತಾಯ, ಸಂಘಟನಾ ಕಾರ್ಯದರ್ಶಿ ಝಕಾರಿಯಾ ಕೊಡಿಪ್ಪಾಡಿ, ಜೊತೆ ಕಾರ್ಯದರ್ಶಿಗಳಾದ ವಿನೀತ್ ಶಗ್ರಿತ್ತಾಯ, ಅಝೀಝ್ ಪಿ.ಟಿ., ಸದಸ್ಯರಾದ ಶಬೀರ್, ಸತ್ಯವತಿ, ಅಮಿತಾ ಹರೀಶ್, ಖಲಂದರ್ ಶಾಫಿ ಮತ್ತಿತರರು ಉಪಸ್ಥಿತರಿದ್ದು, ಸಲಹೆ- ಸೂಚನೆ ನೀಡಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.