ಎಕ್ಸೆಲ್ ನಲ್ಲಿ ಪರೀಕ್ಷೆಯೊಂದು ಹಬ್ಬ, ಸಂಭ್ರಮಿಸಿ ಕಾರ್ಯಾಗಾರ

0

ಗುರುವಾಯನಕೆರೆ: ಸಂಪೂರ್ಣ ತಯಾರಿ ನಡೆಸಿ ಹೋಗುವ ವಿದ್ಯಾರ್ಥಿಗೆ ಪರೀಕ್ಷಾ ಭಯವಿರುವುದಿಲ್ಲ. ಆತ ತನ್ನ ಜ್ಞಾನ ಅನಾವರಣಕ್ಕೆ ಅದೊಂದು ಅವಕಾಶ ಎಂದು ತಿಳಿಯುತ್ತಾನೆ. ಎಂದು ಅಂತರಾಷ್ಟ್ರೀಯ ಖ್ಯಾತಿಯ ತರಬೇತುದಾರ ಮೈಸೂರಿನ ಚೇತನ್ ರಾಮ್ ಆರ್ ಎ ಹೇಳಿದರು.

ಅವರು  ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪರೀಕ್ಷೆ ಒಂದು ಹಬ್ಬ , ಸಂಭ್ರಮಿಸಿ ಕಾರ್ಯಾಗಾರದಲ್ಲಿ ಮಾತನಾಡಿ  ” ಸಂತೋಷವಾಗಿದ್ದಾಗ ಮರೆತು ಹೋದ ವಿಷಯಗಳು ಕೂಡಾ ನೆನಪಾಗುತ್ತವೆ. ಭಯಗೊಂಡಾಗ ಸರಿಯಾಗಿ ಓದಿದ ವಿಷಯಗಳು ಕೂಡಾ ಮರೆತು ಹೋಗುತ್ತವೆ ” ಎಂದು ಹೇಳಿದರು.

ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಎಕ್ಸೆಲ್ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ವಹಿಸಿದ್ದರು.

ಕಾರ್ಯದರ್ಶಿ ಅಭಿರಾಮ್ ಬಿ ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಡಾ. ನವೀನ್ ಕುಮಾರ್ ಮರಿಕೆ ಸ್ವಾಗತಿಸಿದರು. ಉಪನ್ಯಾಸಕ ಜಯರಾಂ ನಿರೂಪಿಸಿದರು. ಪುರುಷೋತ್ತಮ್ ವಂದಿಸಿದರು.

LEAVE A REPLY

Please enter your comment!
Please enter your name here