ಪಂಚಮುಖಿ ಕ್ಷೇತ್ರ, ಕರ್ನೂರು ಸತೀಶ್ ರೈ ಮನೆಗೆ ಖ್ಯಾತ ನಿರೂಪಕಿ ಅನುಶ್ರೀ ಭೇಟಿ – ಹಳ್ಳಿಮನೆಯಲ್ಲಿ ಹೊಸ ವರ್ಷಾಚರಣೆ ಸಂಭ್ರಮಿಸಿದ ನಟಿ

0

ಪುತ್ತೂರು: ಕನ್ನಡ ಕಿರುತೆರೆಯ ಖ್ಯಾತ ನಿರೂಪಕಿ, ಚಲನಚಿತ್ರ ನಟಿ ಅನುಶ್ರೀಯವರು ಪ್ರಗತಿಪರ ಕೃಷಿಕ ಕರ್ನೂರು ಸತೀಶ್ ರೈಯವರ ಮನೆಗೆ ದ.30ರಂದು ಸಂಜೆ ಭೇಟಿ ನೀಡಿದ್ದಾರೆ. ತನ್ನ ತಾಯಿ ಶಶಿಕಲಾ, ತಮ್ಮ ಅಭಿಜಿತ್ ಹಾಗೂ ಇತರರೊಂದಿಗೆ ಬಂದ ಅನುಶ್ರೀಯವರು ಹೊಸ ವರ್ಷವನ್ನು ಸತೀಶ್ ರೈಯವರ ಮನೆ ಹಾಗೂ ಕೃಷಿತೋಟದಲ್ಲಿ ಆಚರಿಸಿದ್ದಾರೆ. ಹೊಸ ವರ್ಷದ ಅಂಗವಾಗಿ ಸತೀಶ್ ರೈ ಮತ್ತು ಮನೆಯವರು ಅನುಶ್ರೀ ಹಾಗೂ ಅವರ ತಂಡದವರಿಗೆ ಶಾಲು,ಫಲಪುಷ್ಪ ನೀಡಿ ಸನ್ಮಾನಿಸಿದರು.

ಕೃಷಿತೋಟ ಕಂಡ ಹರ್ಷ ವ್ಯಕ್ತಪಡಿಸಿದ ಅನುಶ್ರೀ
ಜಿಲ್ಲಾ ಕೃಷಿ ಪ್ರಶಸ್ತಿ ಪುರಸ್ಕೃತ ಸತೀಶ್ ರೈಯವರ ಕೃಷಿತೋಟವನ್ನು ವೀಕ್ಷಣೆ ಮಾಡಿದ ಅನುಶ್ರೀಯವರು ಹರ್ಷ ವ್ಯಕ್ತಪಡಿಸಿದರು. ಹೊಸ ವರ್ಷವನ್ನು ಹಳ್ಳಿಯ ಸೊಗಡಿನಲ್ಲಿ ಆಚರಣೆ ಮಾಡುತ್ತಿರುವುದು ಖುಷಿ ತಂದಿದೆ ಎಂದರು.

ದೇವರ ದರ್ಶನ
ಅನುಶ್ರೀಯವರು ಜ.1ರಂದು ಈ‍್ವರಮಂಗಲ ಪಂಚಲಿಂಗೇಶ್ವರ, ಹನುಮಗಿರಿ ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಈಶ್ವರಮಂಗಲ ಗಜಾನನ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳೊಂದಿಗೆ ಸರಳವಾಗಿ ಬೆರೆತು ಶ್ರೀ ಕ್ಷೇತ್ರದಲ್ಲಿ ಊಟ ಸವಿದರು. ಪುಟಾಣಿ ವಿದ್ಯಾರ್ಥಿಗಳು ಅನುಶ್ರೀ ಜತೆ ಸೆಲ್ಫಿ ತೆಗೆದು ಸಂಭ್ರಮಿಸಿದರು. ಧರ್ಮದರ್ಶಿ ಶಿವರಾಮ ಶರ್ಮರವರು ಅನುಶ್ರೀಯವರನ್ನು ಕ್ಷೇತ್ರಕ್ಕೆ ಬರ ಮಾಡಿಕೊಂಡರು.

 

ಈ ಸಂದರ್ಭದಲ್ಲಿ ಚಿತ್ರ ನಿರ್ದೇಶಕ ರಾಜ್‌ಕುಮಾರ್, ಅಂಜಲಿರಾಜ್, ಝೀ ಕನ್ನಡದ ಡ್ಯಾನ್ಸ್ ಕೊರಿಯೋಗ್ರಾಫರ್ ಪ್ರಮೋದ್ ಆಳ್ವ, ಸತೀಶ್ ರೈ ಮನೆಯವರಾದ ಜಯಂತಿ ಎಸ್.ರೈ, ಪುಷ್ಪಾವತಿ ಆಳ್ವ, ಸೀತಾವತಿ ರೈ, ಅನೂಪ್ ರೈ ಮತ್ತಿತರರು ಉಪಸ್ಥಿತರಿದ್ದರು.

 

 

LEAVE A REPLY

Please enter your comment!
Please enter your name here