ಸರಕಾರಿ ಶಾಲಾಭಿವೃದ್ಧಿ ಸಮಿತಿ ರಚನೆ: ಅಧ್ಯಕ್ಷರಾಗಿ ಖಾದರ್ ಪೋಳ್ಯ; ಉಪಾಧ್ಯಕ್ಷರಾಗಿ ಮಾಲತಿ;

0

ಪುತ್ತೂರು: ದ.ಕ.ಜಿ.ಪಂ.ಹಿ.ಪ್ರಾ. ಮುರ ಶಾಲೆಯಲ್ಲಿ ಕಬಕ ಗ್ರಾ ಮ ಪಂಚಾಯತ್ ಅಧ್ಯಕ್ಷ ವಿನಯ್‌ಕುಮಾರ್ ಕಲ್ಲೇಗರವರ ಅಧ್ಯಕ್ಷತೆಯಲ್ಲಿ ಶಾಲಾಭಿವೃದ್ಧಿ ಸಮಿತಿ ರಚಿಸಲಾಯಿತು. ನೂತನ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಪೋಳ್ಯ ಮತ್ತು ಉಪಾಧ್ಯಕ್ಷರಾಗಿ ಮಾಲತಿ ಆಯ್ಕೆಯಾದರು. ಸದಸ್ಯರಾಗಿ ಶೋಭಾರತ್ನ, ಪೂವಪ್ಪ, ಚಂದ್ರಾವತಿ, ವೇದಾವತಿ, ಮೈಮೂನ, ಝೋಹಾರಾ, ಹೈದರ್, ಅಬ್ದುಲ್ ರಹಿಮಾನ್, ಉಮ್ಮರ್ ಫಾರೂಕ್, ಆಯಿಶಾ, ಸಂಶುದ್ದೀನ್, ರಂಝಿನಾ, ಕಮರುನ್ನೀಸಾ, ಹಸೈನಾರ್ ಬನಾರಿ, ಪುಷ್ಪಾ ಮತ್ತು ವನಿತಾ ಇವರನ್ನು ಆಯ್ಕೆ ಮಾಡಲಾಯಿತು. ಕಬಕ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರುಕ್ಮಯ್ಯ ಗೌಡ, ಹಾರಾಡಿ ಕ್ಲಸ್ಟರಿನ ಸಿ.ಆರ್.ಪಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಶೋಭಾ ಟಿ.ಆರ್ ಎಸ್.ಡಿ. ಎಂ.ಸಿ ರಚನೆ ಬಗ್ಗೆ ಮಾಹಿತಿ ನೀಡಿದರು. ಸಹ ಶಿಕ್ಷಕಿ ಮೀನಾ ಡಾಯಸ್ ಪ್ರಾರ್ಥನೆಗೈದರು. ಸಹಶಿಕ್ಷಕಿ ರೇಷ್ಮಾ ಡಿ.ವಿ. ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ಸುಧಾಕರ ರೈ ಜಿ ವಂದಿಸಿದರು.

LEAVE A REPLY

Please enter your comment!
Please enter your name here