ಗುತ್ತಿಗಾರು :ಆಜಾಧಿ ಕಾ ಅಮೃತ ಮಹೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟ

0

ಕೆ. ಎಸ್. ಎಂ.ಸಿ.ಎ ಗುತ್ತಿಗಾರು ಹಾಗೂ ಸೈಂಟ್ ಮೇರಿಸ್ ಚರ್ಚ್, ಗುತ್ತಿಗಾರು ಇದರ ಆಶ್ರಯದಲ್ಲಿ ಸ್ವತಂತ್ರ್ಯ ದಿನದ ಅಮೃತ ಮಹೋತ್ಸವದ ಪ್ರಯುಕ್ತ ಗುತ್ತಿಗಾರು ಗ್ರಾಮದ ಪ್ರೌಢ ಶಾಲಾ ವಿದ್ಯಾರ್ಥಿ ಗಳಿಗೆ ಗ್ರಾಮ ಮಟ್ಟದ ಪ್ರಬಂಧ ಸ್ಪರ್ಧೆ ಯನ್ನು ಹಮ್ಮಿಕೊಳ್ಳಲಾಗಿತ್ತು . ” ಪ್ರಜಾಪ್ರಭುತ್ವ ದೇಶ ನಮ್ಮ ಭಾರತ ” ಎಂಬ ವಿಷಯದ ಬಗ್ಗೆ ಗುತ್ತಿಗಾರು ಗ್ರಾಮದ ಪ್ರೌಢ ಶಾಲಾ ವಿದ್ಯಾರ್ಥಿ ಗಳು ಭಾಗವಹಿಸಿದರು.

75 Azadi Ka Amrut Mahotsav logo PNG Transparent Download Free

ಅದರಲ್ಲಿ ಸರಕಾರಿ ಪ್ರೌಢ ಶಾಲೆ ಗುತ್ತಿಗಾರು ಇದರ ಅನ್ವಿತ್. ಎಂ. ವಿ ಪ್ರಥಮ, ಕನ್ನಿಕಾ. ಕೆ. ಜಿ ದ್ವಿತೀಯ, ತ್ನವ್ಯಶ್ರಿ. ಕೆ. ಎ ಹಾಗೂ ಬ್ಲೆಸ್ಸ್ಡ್ ಕುರಿಯಾಕೋಸ್ ಆಂಗ್ಲ ಮಾಧ್ಯಮ ಶಾಲೆಯ ಶ್ರೀಪ್ರಿಯ. ಪಿ. ಡಿ ತೃತೀಯ ಬಹುಮಾನ ಪಡೆದಿರುವರು.

ಸೆ.18 ರಂದು ಗುತ್ತಿಗಾರು ಸೈಂಟ್ ಮೇರಿಸ್ ಚರ್ಚಿನ ಸಭಾಂಗಣದಲ್ಲಿ ಬಹುಮಾನ ವಿತರಣೆ ನಡೆಯಲಿದ್ದು ಭಾಗವಹಿಸುವಂತೆ ಕೋರಲಾಗಿದೆ. ಬಹುಮಾನವಾಗಿ ರೂ 2001, ರೂ 1501,ರೂ 1001 ಇರಲಿದೆ.   

LEAVE A REPLY

Please enter your comment!
Please enter your name here