ಪಂಜ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಗುರುವಂದನಾ ಕಾರ್ಯಕ್ರಮ

0

ಲಯನ್ಸ್ ಕ್ಲಬ್ ಪಂಜ ಇದರ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಗುರುವಂದನಾ ಕಾರ್ಯಕ್ರಮ ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ಜರಗಿತು. ಸಭಾಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಪುರುಷೋತ್ತಮ ದಂಬೆಕೋಡಿ ವಹಿಸಿದ್ದರು.ನಿವೃತ್ತ ಶಿಕ್ಷಕ ಕುಸುಮಾಧರ ಕೆ ಮತ್ತು ಅವರ ಪತ್ನಿ ಶಿಕ್ಷಕಿ ಸರೋಜಿನಿರವರನ್ನು ಮತ್ತು ನಿವೃತ್ತ ಶಿಕ್ಷಕ ಮುತ್ತಪ್ಪ ಗೌಡ ಏನೆಕಲ್ಲು ಮತ್ತು ಅವರ ಪತ್ನಿ ಮುಖ್ಯ ಶಿಕ್ಷಕಿ ಧರ್ಮಾವತಿ ಯವರನ್ನು ಸನ್ಮಾನಿಸಲಾಯಿತು. ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ತುಕಾರಾಂ ಏನೆಕಲ್ಲು ಸನ್ಮಾನಿಸಿದರು.

ಕಾರ್ಯದರ್ಶಿ ನಾಗೇಶ್ ಕಿನ್ನಿಕುಮೇರಿ, ಕೋಶಾಧಿಕಾರಿ ಕರುಣಾಕರ ಎಣ್ಣೆಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ಪುರುಷೋತ್ತಮ ದಂಬೆಕೋಡಿ ಸ್ವಾಗತಿಸಿದರು ನಾಗೇಶ್ ಕಿನ್ನಿಕುಮೇರಿ ವಂದಿಸಿದರು.

 

LEAVE A REPLY

Please enter your comment!
Please enter your name here