ನಿಸ್ವಾರ್ಥ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಗಾಂಧಿನಗರದ ಯುವಕ ಮಸೂದ್

0

 

ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಯ ಮಹಾಪೂರ

ಸುಳ್ಯ ಬೀಜಕೊಚ್ಚಿ ನಿವಾಸಿ ಮಸೂದ್(ಅಚ್ಚು) ಎಂಬ ಯುವಕನ ನಿಸ್ವಾರ್ಥ ಸಮಾಜ ಸೇವೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

 

ಕೂಲಿ ಕಾರ್ಮಿಕರಾಗಿರುವ ಇವರು ಬೆಳಗ್ಗಿನ ಜಾವ ಇವರ ಪರಿಸರದಲ್ಲಿ ರಸ್ತೆಗಳಲ್ಲಿರುವ ಹೊಂಡ ಗುಂಡಿಗಳನ್ನು ಒಬ್ಬನೇ ಶ್ರಮದಾನ ಮಾಡುವ ಮೂಲಕ ರಸ್ತೆಯಲ್ಲಿ ಸಂಚರಿಸುವವರಿಗೆ ಸಹಕಾರಿಯಾಗುತ್ತಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಗಾಂಧಿನಗರ ಕೆಪಿಎಸ್ ಶಾಲೆಯ ಬಳಿ ರಸ್ತೆಯಲ್ಲಿದ್ದ ಹೊಂಡವನ್ನು ಕೆಂಪು ಕಲ್ಲುಗಳನ್ನು ತಂದು ಹುಡಿ ಮಾಡಿ ಹೊಂಡವನ್ನು ಮುಚ್ಚಿ ಸಂಚಾರಕ್ಕೆ ಯೋಗ್ಯವನ್ನಾಗಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಇದೀಗ ಅಂತಹದೇ ಒಂದು ಬೃಹತ್ ಗುಂಡಿ ಗಾಂಧಿನಗರ ಆಲೆಟ್ಟಿ ತಿರುವು ಬಳಿ ಬಹಳ ದಿನಗಳಿಂದ ವಾಹನ ಸಂಚಾರರಿಗೆ ಸಮಸ್ಯೆ ಉಂಟು ಮಾಡುತ್ತಿತ್ತು. ಮಾಧ್ಯಮಗಳಲ್ಲಿ ಇದರ ಬಗ್ಗೆ ವರದಿಗಳು ಬಿತ್ತರಗೊಂಡಿದ್ದರೂ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಂಡಿರಲಿಲ್ಲ.

ಇದನ್ನು ಕಂಡ ಮಸೂದ್ ರವರು ಇಂದು ಬೆಳಿಗ್ಗೆ ತಮ್ಮ ಮಾರುತಿ 800 ಕಾರಿನಲ್ಲಿ ಕೆಂಪು ಕಲ್ಲುಗಳ ಹುಡಿಗಳನ್ನು ಮತ್ತು ಮಣ್ಣುಗಳನ್ನು ತಂದು ಬೃಹತ್ ಹೊಂಡವನ್ನು ಮುಚ್ಚುವ ಕಾರ್ಯ ಮಾಡಿದ್ದು ಇದರಿಂದ ಸಾರ್ವಜನಿಕರಿಂದ ಪ್ರಸಂಸೆಗೆ ಪಾತ್ರರಾಗಿದ್ದಾರೆ.
ಈ ಕಾರ್ಯ  ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

LEAVE A REPLY

Please enter your comment!
Please enter your name here