ಪಂಜ ವಲಯ ಪ್ರತಿಭಾ ಕಾರಂಜಿಯಲ್ಲಿ ಎಸ್. ಎಸ್.ಪಿ.ಯು ಕಾಲೇಜು, ಪ್ರೌಢಶಾಲೆ ಸುಬ್ರಹ್ಮಣ್ಯಕ್ಕೆ ಹಲವು ಪ್ರಶಸ್ತಿ

0

 

ಎಣ್ಮೂರು ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಪಂಜ ವಲಯ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಎಸ್. ಎಸ್.ಪಿ.ಯು ಕಾಲೇಜು, ಪ್ರೌಢಶಾಲೆಯ ವಿದ್ಯಾರ್ಥಿಗಳು ಹಲವು ಬಹುಮಾನ ಗಳಿಸಿದ್ದಾರೆ.

ಚರ್ಚಾ ಸ್ಪರ್ಧೆ – ವನ್ಟಿತ್.ಎ.ಎನ್., ಸಂಸ್ಕೃತ ಧಾರ್ಮಿಕ ಪಠಣ – ರಾಕೇಶ್ ಕೃಷ್ಣ, ಸಂಸ್ಕೃತ ಭಾಷಣ -ಭಾನು ಶ್ರೀ ಬಿ ಹೆಚ್ ಮತ್ತು ಜಾನಪದ ನೃತ್ಯದಲ್ಲಿ ಅನನ್ಯ ಎಸ್, ಭಾನುಶ್ರೀ.ಬಿ.ಹೆಚ್, ಕೃತಿಕಾ.ಜಿ.ಡಿ, ರಕ್ಷಾ, ರಶ್ಮಿ, ಅಂಕಿತಾ .ಎಂ.ಎನ್, ಚೈತನ್ಯ.ಡಿ.ಪಿ, ಶ್ರದ್ದಾ, ರಚನಾ, ಮೋಕ್ಷಿತಾ, ಅನುಷಾ, ದೇವಿಕಾ ಪ್ರಥಮ ಸ್ಥಾನ ಪಡೆದಿದ್ದಾರೆ. ಇಂಗ್ಲಿಷ್ ಭಾಷಣ – ಭೂಮಿಕಾ ದ್ವಿತೀಯ ಸ್ಥಾನ ಪಡೆದರೆ, ಭರತನಾಟ್ಯದಲ್ಲಿ ಅನನ್ಯ.ಭಟ್ ಮತ್ತು ಕನ್ನಡ ಭಾಷಣದಲ್ಲಿ ಚೈತನ್ಯ.ಡಿ.ಪಿ ತೃತೀಯ ಸ್ಥಾನ ಬಹುಮಾನ ಪಡೆದಿದ್ದಾರೆ. ಮುಖ್ಯೋಪಾದ್ಯಾಯರಾದ ಯಶವಂತ ರೈ, ಶಿಕ್ಷಕ ರಘು ಬಿಜೂರ್, ಶಿಕ್ಷಕಿಯರಾಗಿರುವ ನಂದಾ ಮತ್ತು ಚೇತಾಕ್ಷಿಯವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು.

LEAVE A REPLY

Please enter your comment!
Please enter your name here