ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಮಾಸಿಕ ಪ್ರಗತಿ ಪರಿಶೀಲನಾ ಸಭೆ ಮತ್ತು ಪದಗ್ರಹಣ ಕಾರ್ಯಕ್ರಮ

0

ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಮಾಸಿಕ ಪ್ರಗತಿ ಪರಿಶೀಲನಾ ಸಭೆಯು ಸೆ.7 ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನೋಡೆಲ್ ಅಧಿಕಾರಿ ಶೈಲಜಾ ಇವರ ನೇತೃತ್ವದಲ್ಲಿ ನಡೆಯಿತು.

ಗ್ರಾಮ ಪಂಚಾಯತ್ ಗಳ VRW ಮತ್ತು ನಗರ ಪಂಚಾಯತಿಯ URW ಹಾಗೂ ತಾಲೂಕು ಸಂಯೋಜಕರಾದ ಚಂದ್ರಶೇಖರರವರು ಭಾಗವಹಿಸಿದ್ದು ನಂತರ 2022-23ನೆ ಸಾಲಿನ ತಾಲೂಕು ಮಟ್ಟದ ಕಾರ್ಯಗಾರಿ ಸಮಿತಿಯ ಪದಗ್ರಹಣ ಕಾರ್ಯಕ್ರಮವನ್ನು ನಡೆಯಿತು. ಇದರಲ್ಲಿ ಅಧ್ಯಕ್ಷರಾಗಿ ಮೀನಾಕ್ಷಿ ಗ್ರಾ.ಪಂ.ಪಂಜ, ಉಪಾಧ್ಯಕ್ಷರಾಗಿ ಉಮ್ಮರ್ ಗ್ರಾ.ಪಂ.ಅಜ್ಜಾವರ, ಕಾರ್ಯದರ್ಶಿಯಾಗಿ ಉಮಾವತಿ ಗ್ರಾ.ಪಂ. ಐವರ್ನಾಡು, ಖಜಾಂಜಿಯಾಗಿ ಪುಷ್ಪಾವತಿ ಗ್ರಾ.ಪಂ. ಬೆಳ್ಳಾರೆ, ಸಂಘಟನಾ ಕಾರ್ಯದರ್ಶಿಯಾಗಿ ರಂಜಿನಿ ಗ್ರಾ.ಪಂ.ಮುರುಳ್ಯ, ಪತ್ರಕರ್ತನಾಗಿ ಹರ್ಷಿತ್ ಗ್ರಾ.ಪಂ.ಸಂಪಾಜೆ ಆಯ್ಕೆಯಾದರು.
ಈ ಹಿಂದೆ ಅಧ್ಯಕ್ಷರಾದ ಪುಟ್ಟಣ್ಣರವರು ನೂತನ ಅಧ್ಯಕ್ಷರಿಗೆ ಪುಸ್ತಕ ಹಸ್ತಾಂತರಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ನಾಯಕ್ ಹಾಗೂ ತಾಲೂಕು ಸಂಯೋಜಕರಾದ ಚಂದ್ರಶೇಖರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here