ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ವಾರ್ಷಿಕ ಮಹಾಸಭೆ ಸಾಧಕರಿಗೆ ಸನ್ಮಾನ

0

 

ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ವಾರ್ಷಿಕ ಮಹಾಸಭೆ ಸೆ. 10ರಂದು ಪ್ರಧಾನ ಕಛೇರಿಯ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಎಂ. ಕೂಸಪ್ಪ ಗೌಡ ಮುಗುಪ್ಪುರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಎಂ. ಕೂಸಪ್ಪ ಗೌಡ ಮುಗುಪ್ಪು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಂಘದ ಮಾಜಿ ಅಧ್ಯಕ್ಷ ಕಿಲಂಗೋಡಿ ಶಂಕರ ರಾವ್ ರವರ ಭಾವಚಿತ್ರವನ್ನು ಮಾಜಿ ಅಧ್ಯಕ್ಷ ರಾಧಾಕೃಷ್ಣ ಕೋಟೆ ಅನಾವರಣಗೊಳಿಸಿದರು. ಸಂಘದ ಸದಸ್ಯ ಸಂಘಕ್ಕೆ ಮರಮುಟ್ಟುಗಳನ್ನು ದೇಣಿಗೆಯಾಗಿ ನೀಡಿದ ಕೆ. ಸುಬ್ರಹ್ಮಣ್ಯ ಹಿಮಗಿರಿ ಕಾವಿನಮೂಲೆಯವರನ್ನು ಮಾಜಿ ಅಧ್ಯಕ್ಷ ಪಿ.ಜಿ.ಎಸ್‌.ಎನ್. ಪ್ರಸಾದ್ ಗೌರವಿಸಿದರು.

ಕಳೆದ ಹತ್ತನೇ ತರಗತಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ
ಸಾತ್ವಿಕ್ ಹೆಚ್.ಎಸ್. ಕಜೆಮೂಲೆ, ಪ್ರದೀಪ್ ತೋಟ ಮತ್ತು ಕು. ರಕ್ಷಾರನ್ನು ಸಂಘದ ಸದಸ್ಯ ರಾಧಾಕೃಷ್ಣ ಉಡುವೆಕೋಡಿ ಸನ್ಮಾನಿಸಿದರು. ಬಳಿಕ ವರದಿ ಸಾಲಿನಲ್ಲಿ ನಿಧನರಾದ ಸಂಘದ ಸದಸ್ಯರಿಗೆ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಂಘದ ಸಿಬ್ಬಂದಿ ಶ್ರೀಮತಿ ಗೀತಾ ಕಾರ್ಯಕ್ರಮ ನಿರೂಪಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ್ ನಾಯಕ್ ವಾರ್ಷಿಕ ವರದಿ ವಾಚಿಸಿದರು. ಸಂಘದ ಉಪಾಧ್ಯಕ್ಷೆ ಶ್ರೀಮತಿ ಮಾಲಿನಿ ಪ್ರಸಾದ್, ನಿರ್ದೇಶಕರಾದ ಎನ್. ವಿಶ್ವನಾಥ ರೈ, ಕೆ. ಅಜಿತ್ ರಾವ್, ಬಿ.‌ ಸುಭಾಶ್ಚಂದ್ರ ರೈ, ಭಾರತೀಶಂಕರ ಎ, ಮೇದಪ್ಪ ಗೌಡ ಟಿ, ಕರುಣಾಕರ ಶೆಟ್ಟಿ ಎನ್, ಸುಬ್ರಹ್ಮಣ್ಯ ಕೆ.ಎಲ್, ಶುಭಕುಮಾರ್ ಬಿ, ವಿಶ್ವನಾಥ ಪರವ, ಶ್ರೀಮತಿ ಎ. ಪುಷ್ಪಾವತಿ ಮತ್ತು ಶ್ರೀಮತಿ ಪಂಕಜಾಕ್ಚಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿಗಳು ಸಹಕರಿಸಿದರು. ಸಂಘದ ಸದಸ್ಯರು ಸಭೆಯ ಕಲಾಪದಲ್ಲಿ ಪಾಳ್ಗೊಂಡು ಸಲಹೆ ಸೂಚನೆಗಳನ್ನು ನೀಡಿದರು.

LEAVE A REPLY

Please enter your comment!
Please enter your name here